ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಪದ್ಧತಿ ನಿಷೇಧ ಕಾನೂನು ಜಾರಿಗೆ ತಂದ ಅಮೆರಿಕದ ಸಿಯಾಟಲ್‌ ನಗರ

ಭಾರತೀಯ ಮೂಲದವರೇ ಹೆಚ್ಚಾಗಿ ನೆಲೆಸಿರುವ ಸಿಯಾಟಲ್‌ನಲ್ಲಿ ಐತಿಹಾಸಿಕ ಕಾನೂನು
Last Updated 22 ಫೆಬ್ರುವರಿ 2023, 6:21 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ವಾಷಿಂಗ್ಟನ್‌ ರಾಜ್ಯದ ಸಿಯಾಟಲ್‌ ನಗರವು, ಜಾತಿ ಪದ್ಧತಿಯನ್ನು ತೊಡೆದು ಹಾಕುವ ಕಾನೂನನ್ನು ಮಂಗಳವಾರ ಜಾರಿಗೆ ತಂದಿದೆ. ಅಲ್ಲಿಗೆ ಇಂಥಹದ್ದೊಂದು ನಿಯಮ ಅನುಷ್ಠಾನಕ್ಕೆ ತಂದ ಅಮೆರಿಕದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಿಯಾಟಲ್‌ನಲ್ಲಿ ದಕ್ಷಿಣ ಏಷ್ಯಾ ಮೂಲದರು, ಅದರಲ್ಲೂ ಭಾರತೀಯ ಹಿಂದೂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಭಾರತದಲ್ಲಿ ಇರುವ ಹಾಗೆ ಅಲ್ಲಿಯೂ ಜಾತಿ ಪದ್ಧತಿ ಆಚರಣೆಯಲ್ಲಿತ್ತು.

ಸಿಯಾಟಲ್‌ ನಗರಸಭೆಯ ಸದಸ್ಯ, ಭಾರತೀಯ ಸಂಜಾತೆ ಕ್ಷಮಾ ಸಾವಂತ್‌ ಅವರು, ಜಾತಿ ಪದ್ಧತಿ ತೊಡೆದು ಹಾಕುವ ಮಸೂದೆ ಮಂಡನೆ ಮಾಡಿದರು. 6–1 ಮತಗಳಿಂದ ಈ ಮಸೂದೆಗೆ ಒಪ್ಪಿಗೆ ಲಭಿಸಿತು.

‘ಈಗ ಅಧಿಕೃತ. ನಮ್ಮ ಚಳವಳಿಯೂ ಐತಿಹಾಸಿಕವಾಗಿ ಗೆಲುವು ಸಾಧಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಸಿಯಾಟಲ್‌ನಲ್ಲಿ ಜಾತಿ ನಿರ್ಮೂಲನೆ ವಿರುದ್ಧ ಕಾನೂನು ಜಾರಿಯಾಗಿದೆ. ಈ ಚಳುವಳಿಯನ್ನು ದೇಶದಾದ್ಯಂತ ಹರಡಬೇಕಾಗಿದೆ‘ ಎಂದು ಕ್ಷಮಾ ಸಾವಂತ್‌ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಹೊಸ ನಿಯಮಕ್ಕೆ ಹಿಂದೂ ಅಮೆರಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಈಗಾಗಲೇ ಅಮೆರಿಕದಲ್ಲಿ ಈ ಥರದ ತಾರತಮ್ಯ ವಿರೋಧಿಸುವ ಕಾನೂನು ಇದ್ದು, ಹೊಸ ಕಾನೂನಿನ ಅಗತ್ಯ ಇಲ್ಲ ಎಂದು ಪ್ರತಿಪಾದಿಸಿದೆ.

ಅಲ್ಲಿ ಆಚರಣೆಯಲ್ಲಿದ್ದ ಜಾತಿ ಪದ್ಧತಿ ನಿಲ್ಲಿಸಬೇಕು ಎಂದು ದಲಿತ ಸಂಘಟನೆಗಳು ಸೇರಿ ಹಲವು ಸಂಘಟನೆಗಳು ಚಳವಳಿ ಆರಂಭಿಸಿದ್ದವು. ಶಾಲಾ ಕಾಲೇಜುಗಳಲ್ಲಿಯೂ ಕೂಡ ಚಳವಳಿಗಳು ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT