ಸೆಷೆಲ್ಸ್: ‘ಇಲ್ಲಿನ ದ್ವೀಪವೊಂದರಲ್ಲಿ ಭಾರತದ ನೌಕಾಪಡೆ ಕೇಂದ್ರ ನಿರ್ಮಿಸುವ ಒಪ್ಪಂದಕ್ಕೆ ಅನುಮತಿ ನೀಡದಿರಲು ಸೆಷೆಲ್ಸ್ ಸಂಸತ್ತು ನಿರ್ಧಾರ ಕೈಗೊಂಡಿದೆ’ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೌಕಾಕೇಂದ್ರ ಸ್ಥಾಪನೆ ಸಂಬಂಧ ಭಾರತ ಹಾಗೂ ಸೆಷೆಲ್ಸ್ ಕಳೆದ ಜನವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಆದರೆ ಈ ಯೋಜನೆಗೆ ವಿರೋಧ ಪಕ್ಷದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು, ಅಲ್ಲದೇ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದ್ದರು.

‘115 ದ್ವೀಪಗಳ ಪೈಕಿ ನೌಕಾಕೇಂದ್ರ ಸ್ಥಾಪನೆಯ ದ್ವೀಪವು ಅತಿ ಹೆಚ್ಚು ಕಾರ್ಯ ಒತ್ತಡದ ಜಲಮಾರ್ಗವೂ ಆಗಿದೆ. ಜಂಟಿ ಅಭಿವೃದ್ಧಿಯನ್ನು ಭಾರತಕ್ಕೆಬಿಟ್ಟು ಕೊಟ್ಟರೆ ದೇಶದ ಭೂಪ್ರದೇಶವನ್ನು ಆ ದೇಶದ ಸ್ವಾಧೀನಕ್ಕೆ ನೀಡಿದಂತಾಗುತ್ತದೆ. ಇದು ದೇಶದ ಸಾರ್ವಭೌಮತೆಗೆ ಸಮಸ್ಯೆ ತಂದೊಡ್ಡಲಿದೆ’ ಎಂದು ವಿರೋಧ ಪಕ್ಷಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.

‘ಸಂಸತ್ತಿನಲ್ಲಿ ಈ ಒಪ್ಪಂದವನ್ನು ಮಂಡಿಸದಿರಲು ಸರ್ಕಾರ ನಿರ್ಧರಿಸಿದೆ. ವಿರೋಧ ಪಕ್ಷದ ಬಹುತೇಕ ಸದಸ್ಯರು ಅನುಮೋದಿಸದಂತೆ ಸೂಚಿಸಿದ್ದಾರೆ’ ಎಂದು ಸೆಷೆಲ್ಸ್ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಬರ್ರಿ ಪೌರೆ ತಿಳಿಸಿದರು.

‘ಈ ಒಪ್ಪಂದ ರದ್ದುಗೊಳಿಸಲಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಆದರೆ ಅಧಿವೇಶನದಲ್ಲಿ ನಾವು ಈ ಪ್ರಸ್ತಾವವನ್ನು ಮಂಡಿಸುವುದಿಲ್ಲ’ ಎಂದರು.

ಮೋದಿ–ಡ್ಯಾನಿ ಭೇಟಿ: ಸೆಷೆಲ್ಸ್ ಅಧ್ಯಕ್ಷ ಡ್ಯಾನಿ ಫೌರೆ ಅವರುಇದೇ ಭಾನುವಾರದಿಂದ ಭಾರತ ಪ್ರವಾಸ ಕೈಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಜೊತೆಗೂ ಮಾತುಕತೆ ನಡೆಸಲಿದ್ದಾರೆ.

ಈ ಬಗ್ಗೆ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡ್ಯಾನಿ ಫೌರೆ, ದ್ವೀಪರಾಷ್ಟ್ರದಲ್ಲಿ ನೌಕಾಸೇನಾ ಕೇಂದ್ರ ಸ್ಥಾಪಿಸುವ ಬಗ್ಗೆ ಮೋದಿ ಜೊತೆ ಚರ್ಚಿಸುವುದಿಲ್ಲ, ಆದರೆ, ಈ ಯೋಜನೆಯನ್ನು ಕೈಬಿಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಆದರೆ, ಮುಂದಿನ ವರ್ಷದ ಬಜೆಟ್‌ನಲ್ಲಿ ಈ ಜಾಗದಲ್ಲಿ ಕರಾವಳಿಕಾವಲು ಕೇಂದ್ರ ಸ್ಥಾಪನೆಗೆ ಹಣ ನಿಗದಿಗೊಳಿಸಲಾಗುವುದು. ಇಲ್ಲಿ ಸೇನಾಕೇಂದ್ರ ಹೊಂದುವುದು ಸೆಷೆಲ್ಸ್ ಪಾಲಿಗೆ ಅತ್ಯಂತ ಮಹತ್ವದ್ದು’ ಎಂದು ಅವರು ವಿವರಿಸಿದರು.

ಒಪ್ಪಂದದ ಪ‍್ರಕಾರ, ಈ ದ್ವೀಪದಲ್ಲಿ ವಿಮಾನರನ್‌ವೇ, ಬಂದರು ನಿರ್ಮಾಣಕ್ಕೆ ಭಾರತ ಸರ್ಕಾರ ಯೋಜನೆ ರೂಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.