ನ್ಯೂಯಾರ್ಕ್: ‘ಅಮೆರಿಕದ ನೌಕಾಪಡೆಯಲ್ಲಿ (ಮೆರಿನ್ ಕಾರ್ಪ್ಸ್) ಸೇವೆ ಸಲ್ಲಿಸುತ್ತಿರುವ ಸಿಖ್ ಸಮುದಾಯಕ್ಕೆ ಸೇರಿದ ಲೆಫ್ಟಿನೆಂಟ್ ಸುಕ್ಬೀರ್ ತೂರ್ ಎಂಬುವವರಿಗೆ ಟರ್ಬನ್ ಧರಿಸಲು ನೌಕಾಪಡೆ ಅನುಮತಿ ನೀಡಿದೆ. 246 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ವಿನಾಯಿತಿ ದೊರೆತಿದೆ.

ಸುಕ್ಬೀರ್ ತೂರ್ (26) ಅವರು ವಾಷಿಂಗ್ಟನ್ ಮತ್ತು ಓಹಿಯೊದಲ್ಲಿ ತಮ್ಮ ಬಾಲ್ಯವನ್ನು ಕಳೆದವರು. ಸೇನೆಯಲ್ಲಿ ಐದು ವರ್ಷಗಳ ಸೇವೆಯ ಬಳಿಕ ಅವರಿಗೆ ಟರ್ಬನ್ ಧರಿಸಲು ಅನುಮತಿ ನೀಡಲಾಗಿದೆ. ಸಾಮಾನ್ಯ ಕರ್ತವ್ಯದ ವೇಳೆ ಅವರು ದೈನಂದಿನ ಸಮವಸ್ತ್ರದೊಂದಿಗೆ ಟರ್ಬನ್ ಧರಿಸಬಹುದು. ಆದರೆ ಸಂಘರ್ಷ ವಲಯದಲ್ಲಿ ಕರ್ತವ್ಯದಲ್ಲಿರುವಾಗ ಮತ್ತು ಸಾರ್ವಜನಿಕರು ನೋಡಬಹುದಾದಂತಹ ಕಾರ್ಯಕ್ರಮದಲ್ಲಿ ಟರ್ಬನ್ ಧರಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.

‘ನೌಕಾಪಡೆಗೆ ನಿಜವಾಗಿಯೂ ವೈವಿಧ್ಯತೆ ಸಾಮರ್ಥ್ಯದಲ್ಲಿ ನಂಬಿಕೆಯಿದೆ ಎಂದಾದರೆ, ಸೇನಾ ಸಿಬ್ಬಂದಿ ನೋಡಲು ಹೇಗೆ ಕಾಣಿಸುತ್ತಾರೆ ಎಂಬುದು ಅದಕ್ಕೆ ಮುಖ್ಯವಾಗಬಾರದು. ಅವರ ಕೆಲಸವೇ ಮುಖ್ಯವಾಗಬೇಕು’ ಎಂದು ಸುಕ್ಬೀರ್ ಪ್ರಬಲವಾಗಿ ವಾದ ಮಂಡಿಸಿ, ನೌಕಾಪಡೆಯನ್ನೇ ಒಪ್ಪಿಕೊಳ್ಳುವಂತೆ ಮಾಡಿದ್ದಾರೆ.

ಅಮೆರಿಕದ ವಾಯುಪಡೆ ಮತ್ತು ಭೂಸೇನೆಯಲ್ಲಿ 100ರಷ್ಟು ಸಿಖ್ ಯೋಧರಿದ್ದು, ಅವರಿಗೆ ಗಡ್ಡ ಬಿಡಲು ಮತ್ತು ಟರ್ಬನ್ ಧರಿಸಲು ಅವಕಾಶ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.