ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ ಅಧ್ಯಕ್ಷೀಯ ಚುನಾವಣೆ: ಮತದಾನ ಆರಂಭ– ರೇಸ್‌ನಲ್ಲಿ ಭಾರತೀಯ ಸಂಜಾತ ಥರ್ಮನ್

Published 1 ಸೆಪ್ಟೆಂಬರ್ 2023, 5:27 IST
Last Updated 1 ಸೆಪ್ಟೆಂಬರ್ 2023, 5:27 IST
ಅಕ್ಷರ ಗಾತ್ರ

ಸಿಂಗಪುರ: ಸಿಂಗಪುರದ ಅಧ್ಯಕ್ಷೀಯ ಚುನಾವಣೆಯ ಮತದಾನ ಆರಂಭವಾಗಿದ್ದು, ತ್ರಿಕೋನ ಸ್ಪರ್ಧೆಯಲ್ಲಿ ಮಾಜಿ ಸಚಿವ, ಭಾರತೀಯ ಸಂಜಾ ಥರ್ಮನ್ ಷಣ್ಮುಗರತ್ನಂ ಸಹ ಇದ್ದಾರೆ.

ಬೆಳಿಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದ್ದು, 27 ಲಕ್ಷ ಮತದಾರರು ಮತ ಚಲಾಯಿಸುವ ನಿರೀಕ್ಷೆಯ ಇದೆ. ರಾತ್ರಿ 8 ಗಂಟೆವರೆಗೂ ಮತದಾನ ಕೇಂದ್ರಗಳು ತೆರೆದಿರುತ್ತವೆ. ನಂತರ ಮತಗಳ ಎಣಿಕೆ ಪ್ರಾರಂಭವಾಗುತ್ತದೆ. ಮಧ್ಯರಾತ್ರಿಯ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಥರ್ಮನ್ ಹೊರತುಪಡಿಸಿ, ದೇಶದ ಒಂಬತ್ತನೇ ಅಧ್ಯಕ್ಷಗಾದಿಯ ರೇಸ್‌ನಲ್ಲಿ ಸಿಂಗಾಪುರ್ ಇನ್ವೆಸ್ಟ್‌ಮೆಂಟ್ ಕಾರ್ಪ್‌ನ (ಜಿಐಸಿ) ಮಾಜಿ ಮುಖ್ಯ ಹೂಡಿಕೆ ಅಧಿಕಾರಿ ಎನ್‌ಜಿ ಕೊಕ್ ಸಾಂಗ್ ಮತ್ತು ಸರ್ಕಾರಿ ಸ್ವಾಮ್ಯದ ಒಕ್ಕೂಟ ಆಧಾರಿತ ವಿಮಾ ಸಂಸ್ಥೆ ಎನ್‌ಟಿಯುಸಿಯ ಮಾಜಿ ಮುಖ್ಯಸ್ಥ ಟಾನ್ ಕಿನ್ ಲಿಯಾನ್ ಇದ್ದಾರೆ.

ಹಾಲಿ ಅಧ್ಯಕ್ಷರಾದ ಹಲಿಮಾ ಯಾಕುಬ್ ಅವರ ಆರು ವರ್ಷಗಳ ಅವಧಿ ಸೆಪ್ಟೆಂಬರ್ 13ರಂದು ಕೊನೆಗೊಳ್ಳಲಿದೆ. ಅವರು ದೇಶದ ಎಂಟನೇ ಮತ್ತು ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದಾರೆ. 2017ರಲ್ಲಿ ಅಧ್ಯಕ್ಷಗಾದಿಗೆ ಮೀಸಲು ಆಧಾರದ ಮೇಲೆ ಚುನಾವಣೆ ನಡೆದಿತ್ತು. ಅದರಲ್ಲಿ ಮಲಾಯ್ ಸಮುದಾಯದ ಸದಸ್ಯರಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿತ್ತು. ಬೇರೆ ಯಾವುದೇ ಅಭ್ಯರ್ಥಿಗಳು ಇಲ್ಲದ ಕಾರಣ ನಾಮಪತ್ರ ಸಲ್ಲಿಸಿದ್ದ ಏಕೈಕ ಅಭ್ಯರ್ಥಿ ಹಲೀಮಾ ಅವರನ್ನು ಅಧ್ಯಕ್ಷರೆಂದು ಘೋಷಣೆ ಮಾಡಲಾಗಿತ್ತು.

2011ರ ನಂತರ ಅಧ್ಯಕ್ಷರ ಆಯ್ಕೆಗೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಭಾರತೀಯ ಮೂಲದ ಸಿಂಗಪುರ ಮೂಲದ ಅರ್ಥಶಾಸ್ತ್ರಜ್ಞರಾದ 66 ವರ್ಷದ ಥರ್ಮನ್ ಅವರು ಜುಲೈನಲ್ಲಿ ಪ್ರಚಾರ ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT