ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ‘ಹಿಮಾನಿ‘ ಇನ್ನಿಲ್ಲ!

ಏಳು ಮರಿಗೆ ಜನ್ಮ ನೀಡಿ ಸುದ್ದಿಯಾಗಿದ್ದ ಹಿಮ ಚಿರತೆ
Last Updated 15 ಫೆಬ್ರುವರಿ 2021, 6:18 IST
ಅಕ್ಷರ ಗಾತ್ರ

ಕೇಪೆ ಮೇ (ಅಮೆರಿಕ): ಒಟ್ಟುಏಳು ಆರೋಗ್ಯವಂತಮರಿಗಳಿಗೆ ಜನ್ಮ ನೀಡುವ ಮೂಲಕ ದೇಶದಾದ್ಯಂತ ಗಮನ ಸೆಳೆದಿದ್ದ ‘ಹಿಮಾನಿ‘ ಎಂಬ ಹಿಮ ಚಿರತೆ 17ನೇ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದಸಾವನ್ನಪ್ಪಿದೆ ಎಂದು ನ್ಯೂಜೆರ್ಸಿಯ ಮೃಗಾಲಯ ತಿಳಿಸಿದೆ.

‘ಒಂದೇ ಬಾರಿಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದ ‘ಹಿಮಾನಿ‘ ಹಿಮ ಚಿರತೆಗಳ ಸಂತತಿ ಕುಸಿಯುತ್ತಿರುವ ಸಂದರ್ಭದಲ್ಲಿ ದೇಶದ ಕಣ್ಮಣಿಯಾಗಿತ್ತು. ಅದು ಜನ್ಮ ನೀಡಿದ ಮರಿಗಳನ್ನು ತಳಿ ವೃದ್ಧಿಗಾಗಿ ದೇಶದ ವಿವಿಧ ಮೃಗಾಲಯಗಳಿಗೆ ಸ್ಥಳಾಂತರಿಸಲಾಗಿದೆ. ಟೆನ್ನೇಸ್ಸಿಯಾ ನಾಕ್ಸಿವಿಲ್ಲೆ ಮೃಗಾಲಯದಲ್ಲಿ 2003ರ ಜೂನ್‌ನಲ್ಲಿ ಜನಿಸಿದ ಈ ಹಿಮ ಚಿರತಯನ್ನು 2009ರಲ್ಲಿ ಕೇಪ್‌ ಮೇ ಕೌಂಟಿ ಮೃಗಾಯಲಯಕ್ಕೆ ತರಲಾಗಿತ್ತು’ ಎಂದು ಮೃಗಾಲಯದ ಉಸ್ತುವಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT