ವಿಂಡ್ಹೋಕ್, ನಮೀಬಿಯಾ: ಎಂಟು ಚೀತಾಗಳನ್ನು ಭಾರತಕ್ಕೆ ಕರೆದೊಯ್ಯುವ ಸಲುವಾಗಿ ವಿಶೇಷ ವಿಮಾನ ‘ಬೋಯಿಂಗ್ 747’ ನಮೀಬಿಯಾ ರಾಜಧಾನಿ ವಿಂಡ್ಹೋಕ್ಗೆ ಬಂದಿಳಿದಿದೆ.

‘ಹುಲಿಗಳ ನಾಡಿಗೆ ಸೌಹಾರ್ದದ ರಾಯಭಾರಿಗಳನ್ನು ಕರೆದೊಯ್ಯಲು ವಿಶೇಷ ವಿಮಾನವೊಂದು ಶೌರ್ಯದ ನಾಡಿನಲ್ಲಿ ಬಂದಿಳಿದಿದೆ’ ಎಂದು ವಿಂಡ್ಹೋಕ್ನಲ್ಲಿರುವ ಭಾರತದ ಹೈಕಮಿಷನ್ ಟ್ವೀಟ್ ಮಾಡಿದೆ.

ಈ ವಿಶೇಷ ವಿಮಾನದ ಮೂಲಕ ಐದು ಹೆಣ್ಣು ಹಾಗೂ ಮೂರು ಗಂಡು ಚೀತಾಗಳನ್ನು ಸೆ. 17ರಂದು ರಾಜಸ್ಥಾನದ ಜೈಪುರಕ್ಕೆ ತರಲಾಗುವುದು. ನಂತರ, ಈ ವನ್ಯಮೃಗಗಳನ್ನು ಹೆಲಿಕಾಪ್ಟರ್ ಮೂಲಕ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕರೆದೊಯ್ಯಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಸೆಪ್ಟೆಂಬರ್ 17ರಂದು ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಹಸ್ತಾಂತರಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.