ಕೊಲಂಬೊ: ‘ಶ್ರೀಲಂಕಾದಲ್ಲಿ 2019ರ ಏಪ್ರಿಲ್ 21ರಂದು ನಡೆದಿದ್ದ ಬಾಂಬ್ ದಾಳಿ ಬಳಿಕ ಡ್ರೋನ್‌ಗಳ ಬಳಕೆ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.

ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

‘ಅಪಾಯಕಾರಿ ಹಾಗೂ ನಿಷೇಧಿತ ವಲಯಗಳಲ್ಲಿ ಡ್ರೋನ್ ಬಳಕೆ ಮೇಲಿನ ನಿರ್ಬಂಧ ಮುಂದುವರಿಯುತ್ತದೆ. ಆದರೆ ನಾಗರಿಕ ಬಳಕೆಗೆ ಡ್ರೋನ್ ನಿರ್ವಹಿಸುವವರು ರಕ್ಷಣಾ ಸಚಿವಾಲಯದ ಅನುಮತಿ ಪಡೆಯುವುದು ಅವಶ್ಯ’ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.