ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಲಂಕಾ: ಐಎಸ್‌ ಶಂಕಿತರಿಗೆ ನೆರವಾದ ವ್ಯಕ್ತಿಯ ಬಂಧನ

Published 1 ಜೂನ್ 2024, 13:24 IST
Last Updated 1 ಜೂನ್ 2024, 13:24 IST
ಅಕ್ಷರ ಗಾತ್ರ

ಕೊಲಂಬೊ: ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಭಾರತದ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿದ್ದ ಶ್ರೀಲಂಕಾದ ನಾಲ್ವರು ಪ್ರಜೆಗಳಿಗೆ ನೆರವಾಗಿದ್ದ ಶಂಕಿತ ವ್ಯಕ್ತಿಯನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

ಶ್ರೀಲಂಕಾದ ಅಪರಾಧ ತನಿಖಾ ವಿಭಾಗದ (ಸಿಐಡಿ) ಪೊಲೀಸರು ಶುಕ್ರವಾರ ಕೊಲಂಬೊದಲ್ಲಿ ಪುಷ್ಪರಾಜ್‌ ಒಸ್ಮಾನ್‌ (47) ಎಂಬಾತನನ್ನು ಬಂಧಿಸಿದ್ದರು.

ಈತನ ಬಗ್ಗೆ ಸುಳಿವು ಅಥವಾ ಮಾಹಿತಿ ನೀಡುವವರಿಗೆ ಶ್ರೀಲಂಕಾ ಪೊಲಿಸರು ಇತ್ತೀಚೆಗೆ ₹20 ಲಕ್ಷ ಬಹುಮಾನ ಘೋಷಿಸಿದ್ದರು. ಆತನ ವಿಡಿಯೊವನ್ನು ಬಿಡುಗಡೆ ಮಾಡಿದ್ದರು. 

ಈತನು, ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿರುವ ನಾಲ್ವರ ಜತೆ ದೂರವಾಣಿ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಾಲ್ವರು ಮೇ 19ರಂದು ಕೊಲಂಬೊದಿಂದ ಚೆನ್ನೈ ಮೂಲಕ ಅಹಮದಾಬಾದ್‌ಗೆ ಬಂದಿದ್ದರು. ಅವರನ್ನು ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT