ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ಜೀವಕ್ಕೆ ಅಪಾಯವಿದೆ: ಶ್ರೀಲಂಕಾ ಕ್ರೀಡಾ ಸಚಿವ

Published 27 ನವೆಂಬರ್ 2023, 14:30 IST
Last Updated 27 ನವೆಂಬರ್ 2023, 14:30 IST
ಅಕ್ಷರ ಗಾತ್ರ

ಕೊಲಂಬೊ: ‘ಕ್ರಿಕೆಟ್ ಆಡಳಿತ ಮಂಡಳಿಯಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ ಕಾರಣಕ್ಕೆ ನನ್ನ ಜೀವಕ್ಕೆ ಅಪಾಯವಿದೆ. ನನಗೆ ಏನಾದರೂ ಆದರೆ, ಅದಕ್ಕೆ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮತ್ತು ಅವರ ಸಲಹೆಗಾರ ಸಗಾಲ ರತ್ನಯಾಕೆ ಅವರೇ ಹೊಣೆ’ ಎಂದು ಶ್ರೀಲಂಕಾದ ಕ್ರೀಡಾ ಸಚಿವ ರೋಷನ್ ರಣಸಿಂಘೆ ಹೇಳಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಿದ ರಣಸಿಂಘೆ, ‘ರಾಜಕೀಯ ದ್ವೇಷಕ್ಕಾಗಿ ನನ್ನ ಮೇಲೆ ವಿಕ್ರಮಸಿಂಘೆ ಅವರು ಹಗೆತನ ಸಾಧಿಸುತ್ತಿದ್ದಾರೆ. ನನ್ನ ಜೀವ ಅಪಾಯದಲ್ಲಿದ್ದು, ಇಂದು ಅಥವಾ ನಾಳೆ ನನ್ನ ಕೊಲೆಯಾಗಬಹುದು’ ಎಂದರು. 

‘ನನ್ನ ಮೇಲೆ ಸುಳ್ಳು ಆರೋಪ ಹೊರಿಸಲು ತೆರಿಗೆ ವಂಚನೆ ಪ್ರಕರಣದಲ್ಲಿ ವಿದೇಶದಿಂದ ತರಿಸಿಕೊಂಡಿದ್ದ ನನ್ನ ವಾಹನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರವನ್ನು ಎತ್ತಿ ತೋರಿಸಿದ್ದಕ್ಕಾಗಿ ಇದು ನನಗೆ ಸಿಕ್ಕ ಬಹುಮಾನವೇ? ಲೆಕ್ಕಪರಿಶೋಧನೆ ವರದಿ ಆಧಾರದ ಮೇಲೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ವಜಾಗೊಳಿಸಿ, ಮಧ್ಯಂತರ ಸಮಿತಿ ರಚನೆ ಮಾಡಿದ್ದೆ. ನನ್ನ ಮೇಲೆ ಅಧ್ಯಕ್ಷರು ರಾಜಕೀಯ ಹಗೆತನ ಸಾಧಿಸುತ್ತಿರುವುದು ಏಕೆ?‘ ಎಂದು ಅವರು ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT