ಸ್ಯಾನ್‌ಫ್ರಾನ್ಸಿಸ್ಕೊ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಈಚೆಗೆ 8 ತಿಂಗಳ ಮಗು ಸೇರಿದಂತೆ ಭಾರತದ ಸಿಖ್ ಕುಟುಂಬವನ್ನು ಹತ್ಯೆ ಮಾಡಿರುವ ಶಂಕಿತ ಆರೋಪಿಯು, ತಾನು ನಿರಪರಾಧಿ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಹತ್ಯೆಗೀಡಾದ ಜಸ್‌ದೀಪ್ ಸಿಂಗ್ ಅವರ ಟ್ರಕ್ಕಿಂಗ್ ಕಂಪನಿಯಲ್ಲೇ ಸಹೋದ್ಯೋಗಿಯಾಗಿದ್ದ ಆರೋಪಿ ಜೀಸಸ್ ಸಲ್ಗಾಡೊ, ಸಿಂಗ್ ಅವರ ಕುಟುಂಬವನ್ನು ಅಪಹರಿಸಿ ಅಲ್ಲಿನ ತೋಟದ ಮನೆಯೊಂದರಲ್ಲಿ ಹತ್ಯೆ ಮಾಡಿದ್ದ.

ಆರೋಪಿ ತಾನು ನಿರಪರಾಧಿ ಎಂದು ಕೋರಿ ಇಲ್ಲಿನ ಮರ್ಸಿಡಿ ಕೌಂಟ್ ಚೀಫ್ ಡೆಪ್ಯೂಟಿ ಜಿಲ್ಲಾ ಅಟಾರ್ನಿ ಮ್ಯಾಥ್ಯೂ ಸೆರಾಟ್ಟೊ ಅವರಿಗೆ ಗುರುವಾರ ಅರ್ಜಿ ಸಲ್ಲಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಹರಣದಲ್ಲಿ ಭಾಗಿಯಾಗಿರುವುದಾಗಿ ಆರೋಪಿ ಒಪ್ಪಿಕೊಂಡಿರುವುದಾಗಿ ಆತನ ಕುಟುಂಬ ಅಧಿಕಾರಿಗಳಿಗೆ ತಿಳಿಸಿತ್ತು. ನಂತರ ಅಕ್ಟೋಬರ್ 6ರಂದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಡಿಸೆಂಬರ್15ಕ್ಕೆ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.