ಪ್ರೆಟೋರಿಯಾ (ದಕ್ಷಿಣ ಆಫ್ರಿಕಾ): ಕೊರೊನಾ ವೈರಸ್ನ ರೂಪಾಂತರ, ಆತಂಕಕಾರಿ ತಳಿಯಾಗಿರುವ ಓಮಿಕ್ರಾನ್ನ ಸೋಂಕಿಗೆ ಒಳಗಾದವರಲ್ಲಿ ರೋಗ ಲಕ್ಷಣ ಕಡಿಮೆ ಪ್ರಮಾಣದಲ್ಲಿರುತ್ತದೆ ಎಂದು ದಕ್ಷಿಣ ಆಫ್ರಿಕಾದ ವೈದ್ಯರು ಹೇಳಿದ್ದಾರೆ.

ಓಮಿಕ್ರಾನ್ ತಳಿಯ ಬಗ್ಗೆ ಮೊದಲಬಾರಿಗೆ ಎಚ್ಚರಿಕೆ ನೀಡಿದ್ದ ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಘದ ಅಧ್ಯಕ್ಷರಾದ ಏಂಜೆಲಿಕ್ ಕೊಯೆಟ್ಜಿ ಅವರು ಈ ವಿಷಯ ತಿಳಿಸಿದ್ದಾರೆ.

ಕಳೆದ 10 ದಿನಗಳಲ್ಲಿ ತಾವು 30 ರೋಗಿಗಳನ್ನು ನೋಡಿರುವುದಾಗಿಯೂ, ಅವರು ಆಸ್ಪತ್ರೆಗೆ ದಾಖಲಾಗದೆ, ಸಾಮಾನ್ಯ ಚಿಕಿತ್ಸೆಯಲ್ಲೇ ಗುಣಮುಖರಾಗಿವುದಾಗಿಯೂ ಅವರು ತಿಳಿಸಿದ್ದಾರೆ.

ಹೆಚ್ಚಿನವರು 40 ವರ್ಷದೊಳಗಿನ ಪುರುಷರಾಗಿದ್ದರು. ಅವರೆಲ್ಲರೂ ಲಸಿಕೆ ಹಾಕಿಸಿಕೊಂಡಿದ್ದರು. ಅವರಿಗೆ ಅಲ್ಪ ಪ್ರಮಾಣದ ಸ್ನಾಯು ನೋವು. ಗಂಟಲಿನಲ್ಲಿ ಕೆಂಪು ಗೆರೆಗಳು, ಒಣ ಕೆಮ್ಮು ಕೂಡ ಇತ್ತು. ಕೆಲವರಿಗಷ್ಟೇ ಸ್ವಲ್ಪ ಹೆಚ್ಚಿನ ಜ್ವರವಿತ್ತು ಎಂದು ಅವರು ವಿವವರಿಸಿದ್ದಾರೆ.

ತಾವು ನೋಡಿದ 30 ರೋಗಿಗಳ ಪೈಕಿ 7 ರೋಗಿಗಳ ವೈದ್ಯಕೀಯ ಚಿತ್ರಣವು ಡೆಲ್ಟಾ ಮಾದರಿಗೆ ಹೊಂದಿಕೆಯಾಗುವಂತಿರಲಿಲ್ಲ ಎಂದಿರುವ ಕೊಯೆಟ್ಜಿ, ಈ ಬಗ್ಗೆ ನವೆಂಬರ್ 18ರಂದು ಆರೋಗ್ಯ ಅಧಿಕಾರಿಗಳಿಗೆ ವರದಿ ಮಾಡಿದ್ದಾಗಿ ತಿಳಿಸಿದ್ದಾರೆ.

ಸದ್ಯ, ಈ ವಿಷಯ ಜಗತ್ತಿನಾದ್ಯಂತ ಕಾಳ್ಗಿಚ್ಚಿನಂತೆ ಹರಡಿದ್ದು, ಬಹುಪಾಲು ರಾಷ್ಟ್ರಗಳು ದಕ್ಷಿಣ ಆಫ್ರಿಕಾಕ್ಕೆ ವಿಮಾನಯಾನ ನಿರ್ಬಂಧಿಸಿವೆ. ಜಗತ್ತಿನ ರಾಷ್ಟ್ರಗಳ ಈ ನಡೆಯನ್ನು ’ಅನ್ಯಾಯ’ ಎಂದು ದಕ್ಷಿಣ ಆಫ್ರಿಕಾ ಈಗಾಗಲೇ ಕರೆದಿದೆ.

ರೂಪಾಂತರಿ ಕೊರೊನಾ ವೈರಸ್ನ ಪ್ರಸರಣವನ್ನು ಮೌಲ್ಯಮಾಪನ ಮಾಡದೆಯೇ ಅದನ್ನು "ಅತ್ಯಂತ ಅಪಾಯಕಾರಿ ರೂಪಾಂತರ’ ಎಂದು ಬಿಂಬಿಸಿರುವುದು ದುರದೃಷ್ಟಕರ. ವಿಶ್ವ ಸಂಸ್ಥೆಯೂ ಕೂಡ ಇದನ್ನು ಆತಂಕಕಾರಿ ಎಂದಷ್ಟೇ ಹೇಳಿದೆ. ವಿಜ್ಞಾನಿಗಳು ಅದರ ಮೇಲೆ ಇನ್ನೂ ಅಧ್ಯಯನಗಳನ್ನು ನಡೆಸುತ್ತಿದ್ದಾರೆ ಎಂದು ಕೊಯೆಟ್ಜಿ ಹೇಳಿದರು.

ಅಪಾಯಕಾರಿ ಎಂದು ಹೇಳಲಾಗುತ್ತಿರುವ ಈ ತಳಿಯು ಅತ್ಯಂತ ವೇಗವಾಗಿ ವ್ಯಾಪಿಸುವ, ಸೋಂಕಿತರ ರೋಗ ನಿರೋಧಕ ಶಕ್ತಿಯುನ್ನು ಕುಗ್ಗಿಸುವ, ಲಸಿಕೆಯ ರಕ್ಷಣೆಯನ್ನು ದಾಟಿ ಸೋಂಕುಂಟು ಮಾಡುವ ಶಕ್ತಿ ಹೊಂದಿದೆ ಎಂದು ನಂಬಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.