ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌ ಸುತ್ತ ಚೀನಾದ 7 ಮಿಲಿಟರಿ ವಿಮಾನಗಳ ಕಾರ್ಯಾಚರಣೆ

Published 5 ಮೇ 2024, 6:13 IST
Last Updated 5 ಮೇ 2024, 6:13 IST
ಅಕ್ಷರ ಗಾತ್ರ

ತೈಪೆ (ತೈವಾನ್): ಚೀನಾದ ಏಳು ಮಿಲಿಟರಿ ವಿಮಾನಗಳು ಮತ್ತು ಐದು ಯುದ್ಧನೌಕೆಗಳು ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ಗಂಟೆವರೆಗೆ ತೈವಾನ್‌ ಸುತ್ತ ಕಾರ್ಯಾಚರಣೆ ನಡೆಸಿರುವುದನ್ನು ತೈವಾನ್‌ನ ರಕ್ಷಣಾ ಸಚಿವಾಲಯ (ಎಂಎನ್‌ಡಿ) ಪತ್ತೆ ಮಾಡಿದೆ.

ತೈವಾನ್‌ನ ಎಂಎನ್‌ಡಿ ಪ್ರಕಾರ, ಏಳು ಮಿಲಿಟರಿ ವಿಮಾನಗಳ ಪೈಕಿ ಒಂದು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿ ತೈವಾನ್‌ನ ನೈರುತ್ಯ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿದೆ.

ಚೀನಾದ ಆಕ್ರಮಣಕಾರಿ ವರ್ತನೆಯನ್ನು ತೈವಾನ್‌ನ ಸಶಸ್ತ್ರ ಪಡೆಗಳು ಮೇಲ್ವಿಚಾರಣೆ ನಡೆಸಿವೆ. ಬಳಿಕ,ಯುದ್ಧ ಗಸ್ತು ವಿಮಾನಗಳು, ಹಡಗುಗಳು ಮತ್ತು ಕರಾವಳಿ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ ಎಂದು ತೈವಾನ್‌ ಹೇಳಿದೆ.

ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ 6 ಗಂಟೆಯವರೆಗೂ ಚೀನಾದ 9 ವಿಮಾನಗಳು ಮತ್ತು ಐದು ಹಡಗುಗಳು ತೈವಾನ್ ಸುತ್ತ ಕಾರ್ಯಾಚರಣೆಯಲ್ಲಿ ತೊಡಗಿದದ್ದೂ ಕಂಡುಬಂದಿತ್ತು.

ಮೇ ತಿಂಗಳಿನಲ್ಲಿ ಈವರೆಗೆ, ಚೀನಾದ ಮಿಲಿಟರಿ ವಿಮಾನಗಳು 39 ಬಾರಿ ಮತ್ತು ಯುದ್ಧನೌಕೆಗಳು 21 ಬಾರಿ ತೈವಾನ್ ಸುತ್ತ ಕಾರ್ಯಾಚರಣೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT