ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ಮಹಿಳೆಯರಿಗೆ ರೆಸ್ಟೋರೆಂಟ್‌ ಪ್ರವೇಶ ನಿಷೇಧ

Last Updated 10 ಏಪ್ರಿಲ್ 2023, 13:50 IST
ಅಕ್ಷರ ಗಾತ್ರ

ಕಾಬೂಲ್ (ಎಪಿ): ವಾಯವ್ಯ ಅಫ್ಗಾನಿಸ್ತಾನದ ಹೆರಾತ್‌ ಪ್ರಾಂತ್ಯದಲ್ಲಿ ಉದ್ಯಾನವಿರುವ ರೆಸ್ಟೋರೆಂಟ್‌ ಅಥವಾ ಹಸಿರಿರುವ ಜಾಗಗಳಲ್ಲಿ ಕುಟುಂಬ ಸದಸ್ಯರು ಮತ್ತು ಮಹಿಳೆಯರು ಪ್ರವೇಶಿಸುವುದನ್ನು ತಾಲಿಬಾನ್‌ ಸರ್ಕಾರ ನಿಷೇಧಿಸಿದೆ.

ಇಂತಹ ಸ್ಥಳಗಳಲ್ಲಿ ಪುರುಷ ಮತ್ತು ಮಹಿಳೆಯರು ಒಟ್ಟಾಗಿ ಸೇರುವುದನ್ನು ತಪ್ಪಿಸಬೇಕು ಎಂದು ಧಾರ್ಮಿಕ ಚಿಂತಕರು ಮತ್ತು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಸರ್ಕಾರವು ಈ ಕ್ರಮ ಕೈಗೊಂಡಿದೆ.

2021ರ ಆಗಸ್ಟ್‌ನಲ್ಲಿ ತಾಲಿಬಾನಿಗಳ ಆಡಳಿತ ಆರಂಭವಾದಾಗಿನಿಂದ ಅಫ್ಗಾನಿಸ್ತಾನದಲ್ಲಿ ಮಹಿಳೆಯರಿಗೆ ಅನೇಕ ರೀತಿಯ ನಿರ್ಬಂಧಗಳನ್ನು ಹೇರುತ್ತಲೇ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT