ಕಾಬೂಲ್: ’ಅಮೆರಿಕದಂತಹ ವಿಶ್ವದ ಅಹಂಕಾರಿ ಶಕ್ತಿಯ ವಿರುದ್ಧ ಜಯಸಾಧಿಸಿದ್ದೇವೆ’ ಎಂದು ಘೋಷಿಸಿಕೊಂಡಿರುವ ತಾಲಿಬಾನ್, ಗುರುವಾರ ಈ ಗೆಲುವನ್ನು ‘ಅಫ್ಗಾನಿಸ್ತಾನದ ಸ್ವಾತಂತ್ರ್ಯ ದಿನ‘ವನ್ನಾಗಿ ಆಚರಿಸಿದೆ.

ಗುರುವಾರ ಅಫ್ಗಾನಿಸ್ತಾನದ ಸ್ವಾತಂತ್ರ್ಯ ದಿನವೂ ಹೌದು. ಇದು ಮಧ್ಯ ಏಷ್ಯಾ ರಾಷ್ಟ್ರಗಳಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಿದ 1919ರ ಒಪ್ಪಂದದ ದಿನವಾಗಿದೆ. ಕಾಬೂಲ್ ಸೇರಿದಂತೆ ಹಲವೆಡೆ ನಾಗರಿಕರು ರಾಷ್ಟ್ರಧ್ವಜ ಪ್ರದರ್ಶಿಸಿ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಿದ್ದಾರೆ.

‘ಅದೃಷ್ಟವಷಾತ್, ಇಂದು ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ದಿನವಾಗಿದೆ. ಇದೇ ಸಂದರ್ಭದಲ್ಲಿ ಜಗತ್ತಿನ ಅಹಂಕಾರಿ ಶಕ್ತಿಯನ್ನು ಸೋಲಿಸಿ ನಮ್ಮ ಪವಿತ್ರ ಪ್ರದೇಶವಾದ ಅಫ್ಗಾನಿಸ್ತಾನದಿಂದ ಹಿಮ್ಮೆಟ್ಟಿಸಿದ್ದೇವೆ’ ಎಂದು ತಾಲಿಬಾನ್ ಹೇಳಿದೆ.

ಇದನ್ನೂ ಓದಿ:ತಾಲಿಬಾನ್ ವಶವಾದ ಅಫ್ಗಾನಿಸ್ತಾನದಲ್ಲಿ ಭೂಕಂಪ

ಇದೇ ವೇಳೆ, ದೇಶವನ್ನು ಮುನ್ನಡೆಸಲು ಅವರಿಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ. ಎಟಿಎಂಗಳಲ್ಲಿ ಹಣದ ಕೊರತೆ ಸೇರಿದಂತೆ ಆಮದುಗಳ ಮೇಲೆ ಅವಲಂಬಿತವಾಗಿರುವ 3.8 ಕೋಟಿ ಜನರು ಆಹಾರದ ಬಗ್ಗೆ ಚಿಂತಿಸುವಂತಾಗಿದೆ. ಅಂತರರಾಷ್ಟ್ರೀಯ ಮಟ್ಟದ ನೆರವಿಲ್ಲದೇ ಹಿಂದಿನ ನಾಗರಿಕ ಸರ್ಕಾರ ಎದುರಿಸಿದ ಸವಾಲುಗಳನ್ನು ತಾಲಿಬಾನ್ ಎದುರಿಸುತ್ತಿದೆ.

ಈ ಮಧ್ಯೆ, ಅಫ್ಗಾನಿಸ್ತಾನದ ಪಂಜ್‌ಶಿರ್ ಕಣಿವೆಗೆ ಪಲಾಯನ ಮಾಡುತ್ತಿರುವ ವಿರೋಧ ಪಕ್ಷದ ವ್ಯಕ್ತಿಗಳು, ‘ನಾರ್ದರನ್ ಅಲಯನ್ಸ್‘ ಬ್ಯಾನರ್ ಅಡಿಯಲ್ಲಿ ಸಶಸ್ತ್ರ ಪ್ರತಿರೋಧ ತೋರುವ ಬಗ್ಗೆ ಯೋಚಿಸುತ್ತಿದ್ದಾರೆ. ಇವರೆಲ್ಲ 2001ರ ಆಕ್ರಮಣದ ವೇಳೆ ಅಮೆರಿಕದೊಂದಿಗೆ ಮೈತ್ರಿ ಮಾಡಿಕೊಂಡಿದ್ದರು.

ಇದನ್ನೂ ಓದಿ:ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಗುಂಡಿನ ದಾಳಿ ಮತ್ತು ಕಾಲ್ತುಳಿತದಲ್ಲಿ ಹಲವರ ಸಾವು

ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ತಾಲಿಬಾನಿಗಳು ಈವರೆಗೆ ‘ತಾವು ಶರಿಯತ್ ಅಥವಾ ಇಸ್ಲಾಮಿಕ್ ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರ ನಡೆಸುತ್ತೇವೆ‘ ಎಂದು ಹೇಳಿರುವುದನ್ನು ಹೊರತುಪಡಿಸಿದರೆ, ಸರ್ಕಾರ ಮುನ್ನಡೆಸಲು ಯಾವುದೇ ಯೋಜನೆಗಳನ್ನು ಪ್ರಕಟಿಸಿಲ್ಲ. ಆದರೆ, ಸರ್ಕಾರ ರಚನೆ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ:ಬಿಚ್ಚಿದ ತಲೆ, ಹೊರಬಂದ ಮಿದುಳು: ಕಾಬೂಲ್ನಲ್ಲಿ ಹಾರಿದ ವಿಮಾನದಿಂದ ಜಾರಿದವರ ವಿವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.