ಕಾಬೂಲ್: ಅಫ್ಗಾನಿಸ್ತಾನದ ಕಂದಹಾರ್ ಮತ್ತು ಹೆರಾತ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಗಳಲ್ಲಿ ತಾಲಿಬಾನಿಗಳು ಶೋಧ ನಡೆಸಿದ್ದಾರೆ. ಕಚೇರಿಯಲ್ಲಿದ್ದ ಕೆಲವು ದಾಖಲೆಗಳನ್ನು ಕೊಂಡೊಯ್ದಿದ್ದಾರೆ ಎಂದು ಮೂಲಗಳು ಹೇಳಿವೆ.

ನುಸುಳುಕೋರರು ಕಚೇರಿ ಕಟ್ಟಡದೊಳಕ್ಕೆ ನುಗ್ಗಿದ್ದು ಮಾತ್ರವಲ್ಲದೆ, ಹೊರಗಡೆ ನಿಲುಗಡೆ ಮಾಡಲಾಗಿದ್ದ ವಾಹನಗಳನ್ನೂ ವಶಕ್ಕೆ ಪಡೆದಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಓದಿ:ನೀನು ಮಹಿಳೆ, ಮನೆಗೆ ತೆರಳು: ಖ್ಯಾತ ಸುದ್ದಿ ನಿರೂಪಕಿಯ ಮೇಲೆ ತಾಲಿಬಾನ್ ನಿರ್ಬಂಧ

ಭಾರತವು ಅಫ್ಗಾನಿಸ್ತಾನದಲ್ಲಿ ನಾಲ್ಕು ದೂತಾವಾಸ ಕಚೇರಿಗಳನ್ನು ಹೊಂದಿದೆ. ಕಂದಹಾರ್, ಹೆರಾತ್, ಮಜರ್–ಇ–ಶರೀಫ್‌ನಲ್ಲಿರುವ ಈ ಕಚೇರಿಗಳನ್ನು ಆಗಸ್ಟ್ 15ರಂದು ಕಾಬೂಲ್ ನಗರವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಮುಚ್ಚಲಾಗಿತ್ತು.

ಅಫ್ಗಾನಿಸ್ತಾನದಲ್ಲಿನ ಬಿಕ್ಕಟ್ಟಿನ ಕಾರಣದಿಂದ ರಾಯಭಾರ ಕಚೇರಿ ಸಿಬ್ಬಂದಿ, ಐಟಿಬಿಪಿ ಸಿಬ್ಬಂದಿಯೂ ಸೇರಿದಂತೆ 120 ಭಾರತೀಯರನ್ನು ಮಂಗಳವಾರ ಭಾರತೀಯ ವಾಯುಪಡೆ ವಿಮಾನದಲ್ಲಿ ಸ್ವದೇಶಕ್ಕೆ ಕರೆದೊಯ್ಯಲಾಗಿತ್ತು.

ಓದಿ:ಆಳ-ಅಗಲ | ತಾಲಿಬಾನ್ ನಾಯಕರು ನೇಪಥ್ಯದಿಂದ ರಂಗಕ್ಕೆ

ಉಳಿದ ಭಾರತೀಯರನ್ನೂ ವಾಪಸ್ ಕರೆಸಿಕೊಳ್ಳಲು ಕ್ರಮ ಕೈಗೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ಭದ್ರತಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ವೇಗವಾಗಿ ಅಫ್ಗಾನಿಸ್ತಾನದಿಂದ ಭಾರತೀಯರ ತೆರವು ಕಾರ್ಯಾಚರಣೆ ನಡೆಸುವಂತೆಯೂ ಅಫ್ಗಾನಿಸ್ತಾನದ ಅಗತ್ಯ ಇರುವ ನಾಗರಿಕರಿಗೆ ನೆರವು ನೀಡುವಂತೆಯೂ ಪ್ರಧಾನಿಯವರು ಅಧಿಕಾರಿಗಳಿಗೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.