ಹಂಟ್: ಅಮೆರಿಕದ ಟೆಕ್ಸಾಸ್ ನಗರದಲ್ಲಿ ಸುರಿದ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾಗಿದ್ದು, ಅಪಾರ ಪ್ರಮಾಣದಲ್ಲಿ ನಾಶ-ನಷ್ಟ ಸಂಭವಿಸಿದೆ.

ಟೆಕ್ಸಾಸ್ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಇದರಲ್ಲಿ 15 ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕದ ಕೆರ್ ಕೌಂಟಿಯಲ್ಲಿ 43, ಟ್ರಾವಿಸ್ ಕೌಂಟಿಯಲ್ಲಿ 4, ಬರ್ನೆಟ್ ಕೌಂಟಿಯಲ್ಲಿ ಇಬ್ಬರು ಮತ್ತು ಗ್ರೀನ್ ಕೌಂಟಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ನಾಪತ್ತೆಯಾದವರ ಹುಡುಕಾಟಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ.

ನದಿ ತೀರದ ಬೇಸಿಗೆ ಶಿಬಿರದಿಂದ ನಾಪತ್ತೆಯಾಗಿರುವ 27 ಬಾಲಕಿಯರಿಗಾಗಿ ಶೋಧ ನಡೆಸಲಾಗುತ್ತಿದೆ. ಈ ಕ್ಯಾಂಪ್ನಲ್ಲಿ ಒಟ್ಟು 750 ಬಾಲಕಿಯರು ಭಾಗವಹಿಸಿದ್ದರು ಎನ್ನಲಾಗಿದೆ.

ಪ್ರವಾಹದ ಹಿನ್ನೆಲೆಯಲ್ಲಿ ನೂರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಪ್ರದೇಶದಲ್ಲಿ ಮತ್ತಷ್ಟು ಮಳೆ ಸುರಿಯುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ (ಎನ್ಡಬ್ಲ್ಯುಎಸ್) ಮುನ್ನೆಚ್ಚೆರಿಕೆ ನೀಡಿದೆ.

ಪ್ರಧಾನಿ ಮೋದಿ ಸಂತಾಪ...

ಟೆಕ್ಸಾಸ್ನಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮಕ್ಕಳು ಸೇರಿದಂತೆ ಅನೇಕ ಮಂದಿ ಮೃತಪಟ್ಟಿರುವ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
.ಟೆಕ್ಸಾಸ್ | ದಿಢೀರ್ ಪ್ರವಾಹ: 24 ಮಂದಿ ಸಾವು, 20 ಬಾಲಕಿಯರು ನಾಪತ್ತೆ.BRICS Summit 2025 | ಬ್ರೆಜಿಲ್ಗೆ ಬಂದಿಳಿದ ಪ್ರಧಾನಿ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.