ಶಾಂಘೈ (ಎಎಫ್‌ಪಿ): ಅಧಿಕಾರಿಗಳೊಂದಿಗೆ ಸ್ಥಳೀಯರ ಮಾತಿನ ಚಕಮಕಿ, ಲಾಕ್‌ಡೌನ್‌ನಿಂದ ಮನೆಗಳಿಂದ ಹೊರಬರಲಾರದೆ ಪರಿತಪಿಸುತ್ತಿರುವ ಜನರು, ಇವು ಶಾಂಘೈನಲ್ಲಿ ಸದ್ಯ ಕಾಣುತ್ತಿರುವ ದೃಶ್ಯಗಳು.

ಶಾಂಘೈನಲ್ಲಿ ಹೇರಿರುವ ಸುದೀರ್ಘಾವಧಿಯ ಲಾಕ್‌ಡೌನ್ ಜನರ ಅಸಹನೆಗೆ ಕಾರಣವಾಗಿದೆ. ಶೂನ್ಯ ಕೋವಿಡ್ ಪ್ರಮಾಣವನ್ನು ದಾಖಲಿಸಲು ಚೀನಾ ಲಾಕ್‌ಡೌನ್ ತಂತ್ರದ ಮೊರೆ ಹೋಗಿದೆ.

ಲಾಕ್‌ಡೌನ್‌ನಿಂದ ಜನರು ಹೈರಾಣಾಗಿದ್ದಾರೆ. ಶಾಂಘೈನ ಮಿನ್‌ಹಾಂಗ್ ಜಿಲ್ಲೆಯಲ್ಲಿ ಸ್ಥಳೀಯರು ಅಧಿಕಾರಿಗಳೊಂದಿಗೆ ಬೀದಿ ಕಾಳಗ ನಡೆಸಿದ್ದಾರೆ. ಈಚೆಗೆ ರಾತ್ರಿ ಆರೋಗ್ಯ ನಿರ್ವಹಣಾ ಸಿಬ್ಬಂದಿ ಮತ್ತು ಜನರ ನಡುವೆ ಜಗಳ ನಡೆದಿದೆ. ಅನೇಕರು ತಮ್ಮ ಕಟ್ಟಡದಿಂದ ಹೊರಗೆ ಬರಲು ಯತ್ನಿಸಿದರು. ಇನ್ನೂ ಕೆಲವರು ಕಿಟಕಿಗಳಿಂದ ವಸ್ತುಗಳನ್ನು ಬೀದಿಗೆ ಎಸೆದರು ಎಂದು ಜಿಲ್ಲೆಯ ಅಧಿಕಾರಿಗಳು ಹೇಳಿದರು.

ಮಿನ್‌ಹ್ಯಾಂಗ್‌ನ ಜುವಾನ್‌ಕಿಯಾವೊನಲ್ಲಿ ಲಾಕ್‌ಡೌನ್ ವಿರುದ್ಧ ಜನರು ರಸ್ತೆಗಿಳಿದು ಘೋಷಣೆ ಕೂಗಿದರು.ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.

ಇತ್ತೀಚಿನ ದಿನಗಳಲ್ಲಿ ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗುತ್ತಿದ್ದರೂ ಅಧಿಕಾರಿಗಳು ಕಠಿಣ ನಿಯಮಗಳನ್ನು ಹೇರುತ್ತಿದ್ದಾರೆ.

ಕೋವಿಡ್ ನೆಗೆಟಿವ್ ವರದಿಯಾದವರೂ ಸೇರಿದಂತೆ ಜನರು ವಾಸಿಸುವ ಪ್ರದೇಶದ ಆವರಣವನ್ನು ಕ್ವಾರಂಟೈನ್ ಮಾಡಲಾಗಿದೆ. ಆಹಾರ ವಿತರಣೆಯನ್ನು ಸೀಮಿತಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.