ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ ಪ್ರಧಾನಿ ತೆರೆಸಾ ರಾಜೀನಾಮೆ

ಬ್ರೆಕ್ಸಿಟ್‌ ಒಪ್ಪಂದಕ್ಕೆ ಸಿಗದ ಬೆಂಬಲ
Last Updated 25 ಮೇ 2019, 1:04 IST
ಅಕ್ಷರ ಗಾತ್ರ

ಲಂಡನ್‌: ಐರೋಪ್ ಒಕ್ಕೂಟದಿಂದ ಹೊರಬರುವ ಒಪ್ಪಂದಕ್ಕೆ (ಬ್ರೆಕ್ಸಿಟ್‌) ಸಂಸತ್‌ನಲ್ಲಿ ಅನುಮೋದನೆ ಪಡೆಯಲು ವಿಫಲಗೊಂಡ ಕಾರಣ ಬ್ರಿಟನ್‌ ಪ್ರಧಾನಿ ತೆರೇಸಾ ಮೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ. ಜೂನ್‌ 7ರಂದು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವುದಾಗಿಯೂ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೂನ್‌ ಮೊದಲ ವಾರದಲ್ಲಿ ಬ್ರಿಟನ್‌ಗೆ ಭೇಟಿ ನೀಡುತ್ತಿರುವ ಕಾರಣ ಜೂನ್‌ 7ರವರೆಗೆ ಅವರು ಹಂಗಾಮಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುವರು. ಜುಲೈ ಅಂತ್ಯದ ಒಳಗಾಗಿ ನೂತನ ಪ್ರಧಾನಿ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

‘ನಾನು ಈ ದೇಶದ ಎರಡನೇ ಮಹಿಳಾ ಪ್ರಧಾನಿ ಎಂಬುದೇ ನನಗೆ ಸಿಕ್ಕ ದೊಡ್ಡ ಗೌರವ. ನಾನು ಪ್ರೀತಿಸುವ ನನ್ನ ದೇಶದ ಸೇವೆ ಮಾಡುವ ಅವಕಾಶ ಲಭಿಸಿದ್ದು ನನ್ನ ಅದೃಷ್ಟ’ ಎಂದು ಮೇ ಹೇಳಿದ್ದಾರೆ.

‘ನಮ್ಮ ರಾಜಕಾರಣ ಒತ್ತಡದಿಂದ ಕೂಡಿರುವುದು ನಿಜವೇ ಆದರೂ, ಈ ದೇಶದ ಭವಿಷ್ಯದ ಬಗ್ಗೆ ನಾವೆಲ್ಲ ಆಶಾವಾದಿಗಳಾಗಬೇಕು’ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಸಿಗದ ಅನುಮೋದನೆ: ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಬಗ್ಗೆ ಕಳೆದ ವರ್ಷದ ಮಾರ್ಚ್‌ 29ರಂದು ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಈ ಮಸೂದೆಗೆ ಬ್ರಿಟನ್‌ ಸಂಸತ್‌ನಲ್ಲಿ ಅಂಗೀಕಾರ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT