ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಹಲವರು, ವಿವಿಧ ರೀತಿಯ ಪುಸ್ತಕಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ಅದರಲ್ಲಿ ಕೆಲವರು ಅವರ ರಾಜಕೀಯದ ಒಳನೋಟ, ಏಳುಬೀಳುಗಳ ಬಗ್ಗೆ ಬೆಳಕು ಚೆಲ್ಲಿದರೆ, ಇನ್ನೂ ಕೆಲವರು ಅವರ ಅಧಿಕಾರದ ಅವಧಿಯ ಬಗ್ಗೆ ಬರೆಯುತ್ತಿದ್ದಾರೆ. ಈ ಪುಸ್ತಕ ಬಿಡುಗಡೆ ವಿಷಯ ಕುರಿತು ವಿಶ್ವದ ಪ್ರಮುಖ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಇತ್ತೀಚೆಗಷ್ಟೇ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು ಟ್ರಂಪ್ ಕುರಿತು ಬರೆದಿರುವ ‘ದ ರೂಮ್ ವೇರ್ ಇಟ್ ಹ್ಯಾಪನ್ಡ್: ಎ ವೈಟ್ ಹೌಸ್ ಮೆಮಾಯಿರ್‘ ಕೃತಿ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಈಗ ಹೊಸ ವಿಷಯ ಏನೆಂದರೆ, ಟ್ರಂಪ್ ಅವರ ಅಣ್ಣನ ಪುತ್ರಿ ಮೇರಿ ಎಲ್. ಟ್ರಂಪ್, ತನ್ನ ಚಿಕ್ಕಪ್ಪಂದಿರಾದ ಡೊನಾಲ್ಡ್ ಟ್ರಂಪ್ ಮತ್ತು ರಾಬರ್ಟ್ ಟ್ರಂಪ್ ಕುರಿತು ಪುಸ್ತಕವೊಂದನ್ನು ಬರೆಯುತ್ತಿದ್ದಾರೆ. ಆ ಕೃತಿಯ ಹೆಸರು 'ಟೂ ಮಚ್ ಅಂಡ್ ನೆವರ್ ಎನಫ್: ಹೌ ಮೈ ಫ್ಯಾಮಿಲಿ ಕ್ರಿಯೇಟೆಡ್ ದ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್'. ಈ ಪುಸ್ತಕ ಮುಂದಿನ ದಿನಗಳು ಬಿಡುಗಡೆಯಾಗಲಿದೆ.

ಈ ಸಹೋದರರ ಜತೆಗೆ ತನ್ನ ತಂದೆ ಫ್ರೆಡ್ ಜೂನಿಯರ್ ಅವರುಹೊಂದಿದ್ದ ವೈರತ್ವದಂತಹ ಸ್ಫೋಟಕ ಮಾಹಿತಿಗಳು, ಸಹೋದರರ ನಡುವಿನ ವ್ಯವಹಾರ ಕುರಿತ ವಿಚಾರಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರಂತೆ. ಅಷ್ಟೇ ಅಲ್ಲ, ಫ್ರೆಡ್ಕುಡಿತದ ದಾಸರಾಗಿ ಹೇಗೆ ದುರಂತದ ಸಾವನ್ನು ಕಂಡರು ಎಂಬ ಮನಕಲಕುವ ಮಾಹಿತಿಗಳೂ ಆ ಕೃತಿಯಲ್ಲಿವೆಯಂತೆ.

ಇದರ ಜತೆಗೆ,ತನಗೆ ಬರಬೇಕಾಗಿದ್ದ ಪಿತ್ರಾರ್ಜಿತ ಆಸ್ತಿಗಾಗಿ ಚಿಕ್ಕಪ್ಪಂದಿರು ಹೇಗೆ ತನ್ನನ್ನು ಸತಾಯಿಸಿದರು. ಅಂತಿಮವಾಗಿ ಆಸ್ತಿ ವ್ಯಾಜ್ಯವು ಹೇಗೆ ನ್ಯಾಯಾಲಯದ ಮೆಟ್ಟಿಲೇರಿತು. ಈ ವಿಚಾರವಾಗಿ ಅವರು ತನ್ನನ್ನು ಹೇಗೆಲ್ಲ ಅವಮಾನಿಸಿದರು ಎಂಬ ಬಗ್ಗೆಯೂ 55 ವರ್ಷದ ಮೇರಿ ಈ ಕೃತಿಯಲ್ಲಿ ಉಲ್ಲೇಖಿಸಿದ್ದಾರಂತೆ.

ತಂದೆಫ್ರೆಡ್ ಜೂನಿಯರ್ ಅತಿ ಕುಡಿತದ ಕಾರಣದಿಂದಾಗಿ ಮೃತಪಟ್ಟಾಗ ಮೇರಿಗೆ 16 ವರ್ಷ ವಯಸ್ಸು.ಫ್ರೆಡ್ ಜೂನಿಯರ್, ಫ್ರೆಡ್ ಸೀನಿಯರ್‌ರ ಹಿರಿಯ ಮಗ. ಫ್ರೆಡ್ ಜೂನಿಯರ್ ನಂತರ ಹುಟ್ಟಿದವರು ಡೊನಾಲ್ಡ್ ಟ್ರಂಪ್ ಮತ್ತು ರಾಬರ್ಟ್ ಟ್ರಂಪ್.

ಈ ಪುಸ್ತಕದಲ್ಲಿ ಕುಟುಂಬದ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ಡೊನಾಲ್ಡ್ ಟ್ರಂಪ್ ಕುಟುಂಬದವರು ಮೇರಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈಗ ಪುಸ್ತಕದಲ್ಲಿಒಪ್ಪಂದಕ್ಕೆ ವಿರುದ್ಧವಾದ ಅಂಶಗಳು ಇವೆ.ಹಾಗಾಗಿ ಆ ಕುಟುಂಬದ ಸದಸ್ಯರುಈ ಪುಸ್ತಕದ ಬಿಡುಗಡೆಗೆ ತಡೆ ತರಲು ಪ್ರಯತ್ನಿಸುತ್ತಿದ್ದು, ಈ ಸಂಬಂಧಟ್ರಂಪ್ ಸಹೋದರರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.