ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 | ವರದಿ ವಾಪಸ್‌ ಪಡೆದ ವಿಜ್ಞಾನಿಗಳು

ಕೋವಿಡ್‌ಗೆ ಸಂಬಂಧಿಸಿದ ಲಾನ್ಸೆಟ್‌, ಎನ್‌ಇಜೆಎಂನಲ್ಲಿ ವರದಿ ಪ್ರಕಟ
Last Updated 5 ಜೂನ್ 2020, 19:30 IST
ಅಕ್ಷರ ಗಾತ್ರ

ಬಾಸ್ಟನ್‌/ನವದೆಹಲಿ: ಕೋವಿಡ್‌–19ಗೆ ಸಂಬಂಧಿಸಿದಂತೆ ಕೈಗೊಂಡಿದ್ದ ಎರಡು ಅಧ್ಯಯನ ಕುರಿತು ದಿ ಲಾನ್ಸೆಟ್‌ ಹಾಗೂ ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌ನಲ್ಲಿ (ಎನ್‌ಇಜೆಎಂ) ತಾವು ಪ್ರಕಟಸಿದ್ದ ವಿವಾದಿತ ಅಧ್ಯಯನ ವರದಿಗಳನ್ನು ವಿಜ್ಞಾನಿಗಳು ಹಿಂಪಡೆದಿದ್ದಾರೆ.

‘ಅಮೆರಿಕ ಇಲಿನಾಯ್‌ನಲ್ಲಿರುವ ‘ಸರ್ಜಿಸ್ಪಿಯರ್ ಕಾರ್ಪೊರೇಷನ್‌‘ ಕಂಪನಿಯ ದತ್ತಾಂಶದ ಆಧಾರದ ಮೇಲೆ ಕೋವಿಡ್‌–19 ಕುರಿತ ವಿಶ್ಲೇಷಣಾತ್ಮಕ ವರದಿಯನ್ನು ಪ್ರಕಟಿಸಲಾಗಿತ್ತು. ಆದರೆ, ಈ ಕಂಪನಿ ತಾನು ಒದಗಿಸಿದ್ದ ದತ್ತಾಂಶಗಳ ಸತ್ಯಾಸತ್ಯತೆಯನ್ನು ದೃಢಪಡಿಸದ ಕಾರಣ ಈ ವರದಿಗಳನ್ನು ಹಿಂಪಡೆಯಲಾಗುತ್ತಿದೆ’ ಎಂದು ವಿಜ್ಞಾನಿ ಮಂದೀಪ್‌ ಮೆಹ್ರಾ ಹೇಳಿದ್ದಾರೆ.

ಮೆಹ್ರಾ ಅವರು ಅಮೆರಿಕದಲ್ಲಿ ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ನಲ್ಲಿ ವಿಜ್ಞಾನಿ. ‘ಸರ್ಜಿಸ್ಪಿಯರ್ ಕಾರ್ಪೊರೇಷನ್‌‘ನ ಸಿಇಒ ಸಪನ್‌ ದೇಸಾಯಿ ಅವರೊಡಗೂಡಿ ಮೆಹ್ರಾ ಈ ವರದಿಗಳನ್ನು ಪ್ರಕಟಿಸಿದ್ದರು.

‘ಆರು ಖಂಡಗಳ ವಿವಿಧ ದೇಶಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 96 ಸಾವಿರ ಕೋವಿಡ್‌ ರೋಗಿಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲಾಗಿದೆ. ಈ ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೊಕ್ವಿನ್‌ (ಎಚ್‌ಸಿಕ್ಯು) ಹಾಗೂ ಕ್ಲೋರೊಕ್ವಿನ್‌ ಔಷಧಿ ನೀಡಲಾಗಿತ್ತು. ಇದರಿಂದಾಗಿ ರೋಗಿಗಳ ಹೃದಯಬಡಿತ ಏರುಪೇರಾಗಿತ್ತು. ಸಾವಿನ ಸಂಖ್ಯೆಯೂ ಹೆಚ್ಚಿತ್ತು’ ಎಂಬ ವರದಿ ದಿ ಲಾನ್ಸೆಟ್‌ ಜರ್ನಲ್‌ನಲ್ಲಿ ಮೇ 22ರಂದು ಪ್ರಕಟವಾಗಿತ್ತು.

ಮೇ 1ರಂದು ಎನ್‌ಇಜೆಎಂನಲ್ಲಿ ಪ್ರಕಟವಾಗಿದ್ದ ವರದಿಯಲ್ಲಿ, ‘ಹೃದಯ ಕಾಯಿಲೆ ಇರುವ ವ್ಯಕ್ತಿಯಲ್ಲಿ ಕೋವಿಡ್‌–19 ಕಾಣಿಸಿಕೊಂಡರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ’ ಎಂದು ವಿವರಿಸಲಾಗಿತ್ತು. ಈ ಎರಡೂ ವರದಿಗಳಿಗೆ ಆಕ್ಷೇಪಿಸಿ ವಿವಿಧ ದೇಶಗಳ ನೂರಕ್ಕೂ ಹೆಚ್ಚು ವಿಜ್ಞಾನಿಗಳು ಆಯಾ ನಿಯತಕಾಲಿಕೆಗಳಿಗೆ ಪತ್ರ ಬರೆದಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT