ಜೆರುಸಲೇಂ/ಫ್ಲಾರಿಡಾ: ಹಮಾಸ್ ಬಂಡುಕೋರರು ಗಾಜಾದಲ್ಲಿ ಸೆರೆಯಲ್ಲಿಟ್ಟಿರುವ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆ ಹಾಗೂ ಸಿರಿಯಾದಲ್ಲಿನ ಬೆಳವಣಿಗೆ ಕುರಿತು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಚರ್ಚೆ ನಡೆಸಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.

ನೂತನ ಅಧ್ಯಕ್ಷರಾಗಿ 2025ರ ಜ.20ರಂದು ಪ್ರಮಾಣವಚನ ಸ್ವೀಕರಿಸುವ ಮುನ್ನ ಈ ಸಮಸ್ಯೆ ಬಗೆಹರಿಯದಿದ್ದರೆ, ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಎದುರಿಸುವ ಪ್ರಮುಖ ವಿದೇಶಿ ಸವಾಲುಗಳಲ್ಲಿ ಇದು ಒಂದಾಗಿರಲಿದೆ ಎಂದು ವಿಶ್ಲೇಷಿಸಲಾಗಿದೆ.

ಟ್ರಂಪ್ ಅವರು ಅಧಿಕಾರ ಸ್ವೀಕರಿಸುವುದಕ್ಕೆ ಮುನ್ನವೇ ಗಾಜಾದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಹಮಾಸ್ ಪಾಲಿಗೆ ‘ಸುಂದರ ದಿನಗಳಿರುವುದಿಲ್ಲ’ ಎಂದು ಪಶ್ಚಿಮ ಏಷ್ಯಾದಲ್ಲಿನ ರಾಯಭಾರಿ ಸ್ಟೀವ್ ವಿಟ್ಕಾಫ್ ಕಳೆದ ವಾರ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಎಚ್ಚರಿಕೆ ನೀಡಿದ್ದರು.

‘ಅಧಿಕಾರ ಸ್ವೀಕಾರಕ್ಕೆ ಮುನ್ನವೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಪಶ್ಚಿಮ ಏಷ್ಯಾದಲ್ಲಿ ‘ನರಕ’ ಇರುತ್ತದೆ ಎಂದು’ ಡೊನಾಲ್ಡ್ ಸಹ ಈ ತಿಂಗಳ ಆರಂಭದಲ್ಲೇ ಗುಡುಗಿದ್ದರು.

ನೆತನ್ಯಾಹು–ಟ್ರಂಪ್ ನಡುವಿನ ಮಾತುಕತೆ ಕುರಿತ ಹೆಚ್ಚಿನ ವಿವರ ನೀಡಲು ನೂತನ ಅಧ್ಯಕ್ಷರ ವಕ್ತಾರರು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.