ಟೆಕ್ಸಾಸ್: ಇರಾನ್ ಅತ್ಯಂತ ಕಠಿಣ ಮತ್ತು ಅಪಾಯಕಾರಿ ದೇಶವಾಗಿದ್ದು, ಪರಮಾಣು ಒಪ್ಪಂದ ಕುರಿತ ಮಾತುಕತೆಗೆ ಸಂಬಂಧಿಸಿದಂತೆ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸದ್ಯ ಪಶ್ಚಿಮ ಏಷ್ಯಾದಲ್ಲಿನ ಮಿಲಿಟರಿ ಸಂಘರ್ಷದ ಬದಲಿಗೆ ಶಾಂತಿ ಮಾರ್ಗದಲ್ಲಿ ಒಪ್ಪಂದಕ್ಕೆ ಬರುವುದು ನಮ್ಮ ಆದ್ಯತೆಯಾಗಿದೆ ಎಂದಿದ್ಧಾರೆ.

ಗುರುವಾರ ಇರಾನ್ ಜೊತೆಗೆ ಮೂರನೇ ಸುತ್ತಿನ ಮಾತುಕತೆ ನಡೆದಿದ್ದು, ಮತ್ತೊಂದು ಸುತ್ತಿನ ಮಾತುಕತೆ ನಿವಾರ(ಫೆ 28) ಜಿನೀವಾದಲ್ಲಿ ನಡೆಯಲಿದೆ.

ಈ ಸಂಬಂಧ ಟೆಕ್ಸಾಸ್ನಲ್ಲಿ ಮಾತನಾಡಿರುವ ಟ್ರಂಪ್, 'ನಾವು ಒಂದು ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಆದರೆ, ಅದು ಅಷ್ಟು ಸುಲಭವಲ್ಲ. 47 ವರ್ಷಗಳಿಂದ ಆ ದೇಶ ಜನರನ್ನು ಹಿಂಸಿಸುತ್ತಿದೆ. ಹಡಗುಗಳನ್ನು ಹೊಡೆದುರುಳಿಸುತ್ತಿದೆ. ಜನರನ್ನು ಕೊಲ್ಲುತ್ತಿದ್ದಾರೆ. ಅಮೆರಿಕನ್ನರನ್ನು ಮಾತ್ರವಲ್ಲ, ಹಲವು ದೇಶಗಳ ಜನರನ್ನು ಕೊಂದಿದ್ದಾರೆ’ಎಂದು ಅವರು ಹೇಳಿದ್ದಾರೆ.

ಇರಾನ್ ಜೊತೆಗಿನ ಮಾತುಕತೆಯಲ್ಲಿ ಅಮೆರಿಕವು ದೊಡ್ಡ ನಿರ್ಧಾರ ಕೈಗೊಳ್ಳುವ ಹಾದಿಯಲ್ಲಿದೆ ಎಂದ ಟ್ರಂಪ್, ಇರಾನ್ ಜೊತೆಗಿನ ಯಾವುದೇ ಒಪ್ಪಂದವು ಅರ್ಥಪೂರ್ಣವಾಗಿರಬೇಕು ಎಂದು ಹೇಳಿದ್ದಾರೆ.

‘ನಿಮಗೆ ತಿಳಿದಿರುವಂತೆ, ನಾವು ಇರಾನ್ ಮೇಲೆ ಬಿ2 ಬಾಂಬರ್ಗಳಿಂದ ದಾಳಿ ಮಾಡಿದ್ದೇವೆ. ಇತ್ತೀಚೆಗೆ ಅವರ ಪರಮಾಣು ಸೌಲಭ್ಯವನ್ನು ಹೊಡೆದುರುಳಿಸಿದ್ದೇವೆ. ಆದರೆ, ನಾನು ಅವರ ಜೊತೆಗಿನ ಒಪ್ಪಂದವನ್ನು ಶಾಂತಿಯುತ ರೀತಿಯಲ್ಲಿ ಮಾಡಲು ಬಯಸುತ್ತೇನೆ, ಆದರೆ, ಅವರ ಜೊತೆ ಮಾತುಕತೆ ತುಂಬಾ ಕಷ್ಟವೆನಿಸುತ್ತಿದೆ. ಅವರು ತುಂಬಾ ಅಪಾಯಕಾರಿ ಜನರು ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ’ ಎಂದು ಟ್ರಂಪ್ ನೆರೆದಿದ್ದವರಿಗೆ ತಿಳಿಸಿದ್ದಾರೆ.

'ಕಳೆದ ಎರಡು ಮೂರು ತಿಂಗಳುಗಳಲ್ಲಿ ಇರಾನ್ನಲ್ಲಿ 32,000 ಜನರು ಕೊಲ್ಲಲ್ಪಟ್ಟಿದ್ದಾರೆ. ಅದು ಅತ್ಯಂತ ಭಯಾನಕ’ ಎಂದಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಪರಮಾಣು ಒಪ್ಪಂದ ಕುರಿತು ಹಲವು ಸುತ್ತಿನ ಮಾತುಕತೆ ನಡೆದಿದ್ದು, ಇದರ ಜೊತೆಗೆ ಪಶ್ಚಿಮ ಏಷ್ಯಾದಲ್ಲಿ ಅಮೆರಿಕವು ಮಿಲಿಟರಿ ಜಮಾವಣೆ ಮಾಡಿರುವುದರಿಂದ ದಾಳಿ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಲವು ದೇಶಗಳು ಇರಾನ್ನಿಂದ ಹೊರಡುವಂತೆ ತಮ್ಮ ನಾಗರಿಕರಿಗೆ ಸೂಚಿಸಿವೆ.
.Op Sindoor| ನನ್ನ ಮಧ್ಯಪ್ರವೇಶದಿಂದ 3.5 ಕೋಟಿ ಜನರ ಜೀವ ಉಳಿದಿದೆ: ಟ್ರಂಪ್.ಅಮೆರಿಕ ಸೂಪರ್ ಪವರ್ ಆಗಿಸುವುದೇ ಎರಡನೇ ಅವಧಿಯ ಗುರಿ: ದೇಶಕ್ಕೆ ಟ್ರಂಪ್ ಭರವಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.