ಗ್ರೀನ್ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ತಮ್ಮ ನಿರ್ಧಾರದಿಂದ ‘ಹಿಂದೆ ಸರಿಯುವುದಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮತ್ತೊಮ್ಮೆ ಪ್ರತಿಜ್ಞೆ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ನಡೆಯನ್ನು ಯುರೋಪಿಯನ್ ಒಕ್ಕೂಟದ ನಾಯಕರು ವಿರೋಧಿಸಲು ಹೆಣಗಾಡುತ್ತಿರುವಾಗ, ಆರ್ಕ್ಟಿಕ್ ದ್ವೀಪವನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಮುಂದಾಗಿರುವ ತಮ್ಮ ನಿರ್ಧಾರ ಮತ್ತು ಮಿತ್ರರಾಷ್ಟ್ರಗಳನ್ನು ಸುತ್ತುವರಿಯುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಟ್ರಂಪ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್ ಮತ್ತು AI ರಚಿತ ಅಣುಕು ಚಿತ್ರಗಳ ಮೂಲಕ ಟ್ರಂಪ್ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ನ್ಯಾಟೋ (NATO) ಸದಸ್ಯ ರಾಷ್ಟ್ರವಾಗಿರುವ ಡೆನ್ಮಾರ್ಕ್ನಿಂದ ಗ್ರೀನ್ಲ್ಯಾಂಡ್ನ ಮೇಲಿನ ಸಾರ್ವಭೌಮತ್ವವನ್ನು ಕಸಿದುಕೊಳ್ಳುವುದು ಮತ್ತು ದಶಕಗಳಿಂದ ಪಾಶ್ಚಿಮಾತ್ಯ ದೇಶಗಳಿಂದ ಭದ್ರತೆ ನೀಡುತ್ತಿರುವ ಮೈತ್ರಿಕೂಟದಿಂದ ಹೊರಬರುವುದಾಗಿ ಬೆದರಿಕೆ ಹಾಕಿದ್ದಾರೆ.

ಕಳೆದ ವರ್ಷ, ತಿಂಗಳುಗಳ ಕಾಲ ಮಾರುಕಟ್ಟೆ ಮತ್ತು ಕಂಪನಿಗಳನ್ನು ಅಲುಗಾಡಿಸಿದ್ದ ಯುರೋಪ್ ಜೊತೆ ವ್ಯಾಪಾರ ಯುದ್ಧವನ್ನು ಮುಂದುವರೆಸುವ ಬೆದರಿಕೆಯನ್ನು ಟ್ರಂಪ್ ಪುನರುಚ್ಚರಿಸಿದ್ದಾರೆ. ಆದರೆ, ಟ್ರಂಪ್ ಅವರ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಗ್ರೀನ್ಲ್ಯಾಂಡ್ ಮೇಲಿನ ‘ಉನ್ಮಾದ‘ ಎಂದು ಕರೆದಿರುವುದನ್ನು ಟ್ರಂಪ್ ವಿರೋಧಿಸಿದ್ದಾರೆ.

‘ನಾನು ಈಗಾಗಲೇ ಎಲ್ಲರಿಗೂ ಸ್ಪಷ್ಟಪಡಿಸಿದಂತೆ, ರಾಷ್ಟ್ರೀಯ ಮತ್ತು ವಿಶ್ವದ ಭದ್ರತೆಯ ದೃಷ್ಟಿಯಿಂದ ನಾವು ಗ್ರೀನ್ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವುದು ಅತ್ಯಗತ್ಯ. ಆ ಪ್ರಕ್ರಿಯೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಅದನ್ನು ಎಲ್ಲರೂ ಒಪ್ಪುತ್ತಾರೆ’ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರೊಂದಿಗಿನ ಮಾತುಕತೆ ಬಳಿಕ ಟ್ರಂಪ್ ಹೇಳಿದ್ದಾರೆ.
.ಗ್ರೀನ್ಲ್ಯಾಂಡ್ ವಶಕ್ಕೆ ಪಡೆಯುವ ನಿರ್ಧಾರ ಬೆಂಬಲಿಸದ ದೇಶಗಳಿಗೆ ತೆರಿಗೆ ಬಿಸಿ.ಗ್ರೀನ್ಲ್ಯಾಂಡ್ ವಶಪಡಿಸಿಕೊಳ್ಳುವ ಟ್ರಂಪ್ ಯತ್ನಕ್ಕೆ ಡೆನ್ಮಾರ್ಕ್ ವಿರೋಧ.
ಗ್ರೀನ್ಲ್ಯಾಂಡ್ ವಶಕ್ಕೆ ಪಡೆಯುವುದರಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನು ಜನರಿಗೆ ತಲುಪಿಸಲು, ಟ್ರಂಪ್ ಅವರು ಕೃತಕ ಬುದ್ಧಿಮತ್ತೆ (ಎಐ) ಬಳಿಸಿ ಗ್ರೀನ್ಲ್ಯಾಂಡ್ನಲ್ಲಿ ಅಮೆರಿಕದ ಧ್ವಜ ಹಿಡಿದುಕೊಂಡಿರುವ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ಕೆನಡಾ ಮತ್ತು ಗ್ರೀನ್ಲ್ಯಾಂಡ್ ಅನ್ನು ಅಮೆರಿಕದ ಭಾಗವಾಗಿ ತೋರಿಸುವ ನಕ್ಷೆಯ ಪಕ್ಕದಲ್ಲಿ ಟ್ರಂಪ್ ಅವರು ಯುರೋಪಿಯನ್ ಯೂನಿಯನ್ ನಾಯಕರೊಂದಿಗೆ ಮಾತನಾಡುತ್ತಿರುವಂತೆ ಕಾಣುವಂತೆ ಚಿತ್ರ ಹಂಚಿಕೊಂಡಿದ್ದಾರೆ.

ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಸಂದೇಶಗಳನ್ನು ಸೋರಿಕೆ ಮಾಡಿದ್ದಾರೆ. ಎಮ್ಯಾನುಯೆಲ್ ಅವರು, ಟ್ರಂಪ್ ಗ್ರೀನ್ಲ್ಯಾಂಡ್ ಮೇಲೆ ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದರು.

ತನ್ನ ದಾರಿಗೆ ಅಡ್ಡ ಬರುವ ದೇಶಗಳ ವಿರುದ್ಧ ಹೆಚ್ಚುವರಿ ಸುಂಕ ವಿಧಿಸುವುದಾಗಿ ಪ್ರತಿಜ್ಞೆ ಮಾಡಿರುವ ಟ್ರಂಪ್, ಈ ಹಿಂದೆ ಫ್ರೆಂಚ್ ವೈನ್ಗಳು ಮತ್ತು ಷಾಂಪೇನ್ಗಳ ಮೇಲೆ 200 ಪ್ರತಿಶತ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.