ವಾಷಿಂಗ್ಟನ್: ಇರಾನ್ನಲ್ಲಿ ಅನಿಶ್ಚಿತತೆ ರೂಪುಗೊಂಡಿರುವ ಬೆನ್ನಲ್ಲೇ ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ವ್ಯಾಪಕ ವ್ಯಾಪಾರ ಎಚ್ಚರಿಕೆಯನ್ನು ಘೋಷಿಸಿದ್ದು, ಅಂತಹ ರಾಷ್ಟ್ರಗಳ ಮೇಲೆ ಶೇ 25ರಷ್ಟು ದಂಡ ರೂಪದ ಹೊಸ ತೆರಿಗೆಗಳನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ.

'ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗೆ ವ್ಯವಹಾರ ನಡೆಸುವ ಯಾವುದೇ ದೇಶವು ತಕ್ಷಣದಿಂದ ಜಾರಿಗೆ ಬರುವಂತೆ, ಅಮೆರಿಕದ ಜೊತೆ ನಡೆಸುವ ಯಾವುದೇ ವ್ಯವಹಾರ ಮತ್ತು ಎಲ್ಲಾ ವ್ಯವಹಾರಗಳ ಮೇಲೆ ಶೇ 25 ರಷ್ಟು ಸುಂಕವನ್ನು ಪಾವತಿಸಬೇಕು. ಈ ಆದೇಶವು ಅಂತಿಮ ಮತ್ತು ನಿರ್ಣಾಯಕವಾಗಿದೆ’ ಎಂದು ಟ್ರಂಪ್ ಸೋಮವಾರ ಟ್ರೂತ್ ಸೋಷಿಯಲ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಇರಾನ್ನ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಚೀನಾ, ಟರ್ಕಿ, ಭಾರತ, ಯುಎಇ, ಪಾಕಿಸ್ತಾನ ಮತ್ತು ಅರ್ಮೇನಿಯಾ ಸೇರಿವೆ.

ಟ್ರಂಪ್ ಅವರ ಘೋಷಣೆಯು ಇತ್ತೀಚಿನ ವರ್ಷಗಳಲ್ಲಿ ಇರಾನ್ನ ಐದು ದೊಡ್ಡ ವ್ಯಾಪಾರ ಪಾಲುದಾರರಲ್ಲಿ ಒಂದಾಗಿರುವ ಭಾರತದ ಮೇಲೆ ಪರಿಣಾಮ ಬೀರಬಹುದು ಎಂದು ವರದಿ ತಿಳಿಸಿದೆ.

ಅಮೆರಿಕವು ಭಾರತದ ಮೇಲೆ ಈಗಾಗಲೇ ಶೇ 50ರಷ್ಟು ಸುಂಕವನ್ನು ವಿಧಿಸಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚು, ಇದರಲ್ಲಿ ರಷ್ಯಾದ ಇಂಧನ ಖರೀದಿಗೆ ದಂಡವಾಗಿ ಶೇ 25ರಷ್ಟು ಸೇರಿದೆ.

ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಭಾರತವು ಇರಾನ್ಗೆ ಅಕ್ಕಿ, ಚಹಾ, ಸಕ್ಕರೆ, ಔಷಧಗಳು, ಮಾನವ ನಿರ್ಮಿತ ನಾರು ಉತ್ಪನ್ನಗಳು, ವಿದ್ಯುತ್ ಯಂತ್ರೋಪಕರಣಗಳು ಮತ್ತು ಕೃತಕ ಆಭರಣಗಳನ್ನು ಪ್ರಮುಖವಾಗಿ ರಫ್ತು ಮಾಡುತ್ತದೆ. ಆದರೆ, ಇರಾನ್ನಿಂದ ಭಾರತಕ್ಕೆ ಡ್ರೈಫ್ರೂಟ್ಸ್, ಸಾವಯವ ರಾಸಾಯನಿಕಗಳು ಮತ್ತು ಗಾಜಿನ ಸಾಮಾನುಗಳು ಆಮದಾಗುತ್ತವೆ.

ಏನಾಗುತ್ತಿದೆ?

ಪ್ರತಿಭಟನಾಕಾರರ ಹತ್ಯೆಯ ಕುರಿತು ಮಿಲಿಟರಿ ಕ್ರಮದ ಬೆದರಿಕೆಗಳು ಸೇರಿದಂತೆ ಇರಾನ್ ನಾಯಕತ್ವದ ಮೇಲೆ ಒತ್ತಡವನ್ನು ತೀವ್ರಗೊಳಿಸುತ್ತಾ, ಅಮೆರಿಕ, ಇರಾನ್ ಅಧಿಕಾರಿಗಳನ್ನು ಭೇಟಿ ಮಾಡಲಿದ್ದು, ಇರಾನ್ನ ವಿರೋಧ ಪಕ್ಷಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಟ್ರಂಪ್ ಭಾನುವಾರ ಹೇಳಿದ್ದಾರೆ.

ವೈಮಾನಿಕ ದಾಳಿ ನಡೆಸುವುದು ಆಯ್ಕೆಯಾಗಿದ್ದು, ರಾಜತಾಂತ್ರಿಕತೆಯು ಆಡಳಿತದ ಆದ್ಯತೆಯಾಗಿ ಉಳಿದಿದೆ. ಟೆಹ್ರಾನ್ನಿಂದ ಅಮೆರಿಕ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ ಎಂದು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.

'ಇರಾನ್ ಆಡಳಿತದಿಂದ ಸಾರ್ವಜನಿಕವಾಗಿ ಕೇಳಿಬರುತ್ತಿರುವ ಸಂದೇಶಗಳು ಆಡಳಿತವು ಖಾಸಗಿಯಾಗಿ ಸ್ವೀಕರಿಸುತ್ತಿರುವ ಸಂದೇಶಗಳಿಗಿಂತ ಸಾಕಷ್ಟು ಭಿನ್ನವಾಗಿದೆ, ಅಧ್ಯಕ್ಷರು ಆ ಸಂದೇಶಗಳ ಬಗ್ಗೆ ಪರಾಮರ್ಶಿಸುವಲ್ಲಿ ನಿರತರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ’ಎಂಬುದಾಗಿಯೂ ಅವರು ತಿಳಿಸಿದ್ದಾರೆ.

ಪ್ರಾದೇಶಿಕ ಪ್ರಭಾವ ದುರ್ಬಲಗೊಂಡಿರುವ ಇರಾನ್ನ ನಾಯಕರು ತೀವ್ರ ಆರ್ಥಿಕ ಸಂಕಷ್ಟದಿಂದ ಪ್ರಾರಂಭವಾದ ವ್ಯಾಪಕ ಪ್ರತಿಭಟನೆಗಳನ್ನು ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.