ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತಭವನಕ್ಕೆ ಮರಳಿದ ಅಕೋಸ್ಟಾ

ಕೋರ್ಟ್ ಆದೇಶ; ಟ್ರಂಪ್‌ಗೆ ಹಿನ್ನಡೆ
Last Updated 17 ನವೆಂಬರ್ 2018, 16:02 IST
ಅಕ್ಷರ ಗಾತ್ರ

ವಾಷಿಂಗ್ಟನ್: ಸಿಎನ್‌ಎನ್‌ ಪತ್ರಕರ್ತ ಜಿಮ್ ಅಕೋಸ್ಟಾ ಅವರಿಗೆ ಶ್ವೇತಭವನಕ್ಕೆ ತಕ್ಷಣದಿಂದಲೇ ಪ್ರವೇಶ ನೀಡುವಂತೆ ಅಮೆರಿಕ ಕೋರ್ಟ್ ಆದೇಶ ನೀಡಿದ್ದು, ಇದು ಅಮೆರಿಕದ ಮಾಧ್ಯಮ ಪ್ರತಿನಿಧಿಗಳಿಗೆ ಸಂದ ಜಯ ಎನ್ನಲಾಗಿದೆ.

ಕಳೆದವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಜೊತೆ ಸಿಎನ್‌ಎನ್‌ನ ಶ್ವೇತಭವನದ ಪತ್ರಕರ್ತ ಅಕೋಸ್ಟಾ ಅವರು ವಾಗ್ವಾದ ನಡೆಸಿದ್ದರು.

ಈ ಕಾರಣಕ್ಕೆ ಅಕೋಸ್ಟಾ ಅವರ ಪತ್ರಿಕಾ ಪಾಸ್ ಅನ್ನು ಶ್ವೇತಭವನ ರದ್ದುಗೊಳಿಸಿತ್ತು. ಕೋರ್ಟ್ ಆದೇಶದ ಬಳಿಕ ಅವರು ಎಂದಿನಂತೆ ವರದಿಗಾರಿಕೆಗೆ ಶ್ವೇತಭವನದಲ್ಲಿ ಹಾಜರಾದರು.

ಶಿಷ್ಟಾಚಾರ ಅಗತ್ಯ:

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಟ್ರಂಪ್, ಶ್ವೇತಭವನದಲ್ಲಿ ಪತ್ರಕರ್ತರು ಶಿಷ್ಟಾಚಾರ ಪಾಲಿಸುವುದು ಅಗತ್ಯ ಎಂದು ಹೇಳಿದರು.

‘ಮಾಧ್ಯಮಕ್ಕೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು ಎಂದು ನಾನು ಬಯಸುತ್ತೇನೆ. ಆದರೆ ನೀವು ಗೌರವಯುತವಾಗಿ ನಡೆದುಕೊಳ್ಳಬೇಕು. ನೀವು ಶ್ವೇತಭವನದಲ್ಲಿದ್ದೀರಿ. ಆದರೆ ಕೆಲವರು ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ’ ಎಂದು ಅವರು ಕಿಡಿಕಾರಿದರು.

‘ಸ್ಥಳದಿಂದ ತೆರಳಲು ಎಲ್ಲರಿಗೂ ಅವಕಾಶವಿದೆ. ಪರಿಸ್ಥಿತಿ ಸರಿ ಎನಿಸಿದಿದ್ದರೆ ಯಾರಾದರೂ ಎದ್ದು ತೆರಳಬಹುದು’ ಎಂದು ಟ್ರಂಪ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT