ವಾಷಿಂಗ್ಟನ್: ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ 14 ರಾಷ್ಟ್ರಗಳ ಮೇಲೆ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಪ್ರತಿಸುಂಕ ವಿಧಿಸುವ ಆದೇಶದ ಪತ್ರಗಳನ್ನು ಸಾಮಾಜಿಕ ಮಾಧ್ಯಮ ಟ್ರುಥ್ನಲ್ಲಿ ಟ್ರಂಪ್ ಹಂಚಿದ್ದಾರೆ.

ಈ ದೇಶಗಳಿಂದ ಆಮದಾಗುವ ಸರಕುಗಳ ಮೇಲೆ ಆಗಸ್ಟ್ 1ರಿಂದ ಸುಂಕ ವಿಧಿಸುವುದಾಗಿ ಟ್ರಂಪ್ ಪ್ರಕಟಿಸಿದ್ದಾರೆ.

ಜಪಾನ್, ದಕ್ಷಿಣ ಕೊರಿಯಾ ಸಹಿತ ಮಲೇಷ್ಯಾ, ಕಜಕಿಸ್ತಾನ, ದಕ್ಷಿಣ ಆಫ್ರಿಕಾ, ಮ್ಯಾನ್ಮಾರ್, ಲಾವೋಸ್, ಥಾಯ್ಲೆಂಡ್, ಬಾಂಗ್ಲಾದೇಶ, ಇಂಡೋನೇಷ್ಯಾ, ಟ್ಯುನೀಷಿಯಾ, ಬೊಸ್ನಿಯಾ, ಸರ್ಬಿಯಾ ಮತ್ತು ಕಾಂಬೋಡಿಯಾ ದೇಶಗಳ ಮೇಲೆ ತೆರಿಗೆ ವಿಧಿಸಿದ್ದಾರೆ.

ಜಪಾನ್, ದಕ್ಷಿಣ ಕೊರಿಯಾ, ಕಜಕಿಸ್ತಾನ, ಮಲೇಷ್ಯಾ ಹಾಗೂ ಟ್ಯುನೀಷಿಯಾದ ಮೇಲೆ ಶೇಕಡ 25, ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ಮೇಲೆ ಶೇ 36, ಬಾಂಗ್ಲಾದೇಶ ಹಾಗೂ ಸರ್ಬಿಯಾ ಮೇಲೆ ಶೇ 35, ಮ್ಯಾನ್ಮಾರ್ ಹಾಗೂ ಲಾವೋಸ್ ಮೇಲೆ ಶೇ 40, ಇಂಡೋನೇಷ್ಯಾ ಮೇಲೆ ಶೇ 32, ದಕ್ಷಿಣ ಆಫ್ರಿಕಾ ಹಾಗೂ ಬೊಸ್ನಿಯಾ ಮೇಲೆ ಶೇ 30ರಷ್ಟು ಸುಂಕ ಹೇರಿದ್ದಾರೆ.

ಈ ರಾಷ್ಟ್ರಗಳು ಅಮೆರಿಕದಿಂದ ರಫ್ತಾಗುವ ಸರಕುಗಳಿಗೆ ಹೆಚ್ಚುವರಿ ಸುಂಕ ವಿಧಿಸಿದರೆ ಅದಕ್ಕೆ ತಕ್ಕಂತೆ ಪ್ರತಿಸುಂಕ ವಿಧಿಸುವುದಾಗಿಯೂ ಟ್ರಂಪ್ ಎಚ್ಚರಿಸಿದ್ದಾರೆ. ಒಂದು ವೇಳೆ ವ್ಯಾಪಾರ ನೀತಿ ಬದಲಾಯಿಸಿದರೆ ಸುಂಕ ಕಡಿತಗೊಳಿಸಲು ಸಿದ್ಧವಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
.Nobel Peace Prize: ಡೊನಾಲ್ಡ್ ಟ್ರಂಪ್ ಹೆಸರು ನಾಮನಿರ್ದೇಶನ ಮಾಡಿದ ನೆತನ್ಯಾಹು.BRICSನ ಅಮೆರಿಕ ವಿರೋಧಿ ನೀತಿ ಬೆಂಬಲಿಸುವ ದೇಶಗಳಿಗೆ ಹೆಚ್ಚುವರಿ ಸುಂಕ: ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.