ವಿಶ್ವ ಸಮುದಾಯ ಮತ್ತು ಅಮೆರಿಕದ ಭಾಗೀದಾರರ ಅಹವಾಲುಗಳಿಗೆ ಅಮೆರಿಕ ಕಿವಿಗೊಡಬೇಕು. ಏಕಪಕ್ಷೀಯವಾಗಿ ಹಾಗೂ ತಪ್ಪಾಗಿ ಹೇರಿರುವ ಸುಂಕಗಳನ್ನು ಸಂಪೂರ್ಣ ಹಿಂಪಡೆಯಬೇಕು
ಹಿ ಯಾಂಗ್‌ಷಿಯಾನ್, ಚೀನಾ ವಾಣಿಜ್ಯ ಸಚಿವಾಲಯ ವಕ್ತಾರೆ
ಅಮೆರಿಕದ ಅಂತರರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯ ನೀಡಿರುವ ತೀರ್ಪನ್ನು ಅಧ್ಯಯನ ಮಾಡಿದ ನಂತರ ಪ್ರತಿಕ್ರಿಯಿಸುವೆ
ರೋಸಿ ಅಕಝಾವಾ, ಸುಂಕಗಳ ಕುರಿತ ರಾಯಭಾರಿ, ಜಪಾನ್
ಟ್ರಂಪ್ ಆಡಳಿತ ವಿಧಿಸಿರುವ ಸುಂಕಗಳ ಕುರಿತ ವಿಚಾರಣೆ ಇನ್ನೂ ಮುಗಿದಿಲ್ಲ. ಹೀಗಾಗಿ, ಅಮೆರಿಕದಲ್ಲಿ ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆ ಕುರಿತು ಪ್ರತಿಕ್ರಿಯಿಸುವುದಿಲ್ಲ. ಪರಸ್ಪರರಿಗೆ ಅನುಕೂಲವಾಗುವಂತಹ ಒಪ್ಪಂದಗಳಿಗೆ ಐರೋಪ್ಯ ಒಕ್ಕೂಟ ಹಾಗೂ ಅಮೆರಿಕ ಮುಂದಾಗಬೇಕು
ಜರ್ಮನಿ ಹಣಕಾಸು ಸಚಿವಾಲಯ ವಕ್ತಾರ
ಸುಂಕಗಳ ಕುರಿತು ನ್ಯಾಯಾಲಯ ನೀಡಿರುವ ತೀರ್ಪು ಅಮೆರಿಕದ ಆಂತರಿಕ ವಿಚಾರ. ಅಲ್ಲದೇ, ಇದು ಕಾನೂನು ಪ್ರಕ್ರಿಯೆಯ ಆರಂಭಿಕ ಹಂತವಾಗಿದೆ