‘ಒಪ್ಪಂದ ಏರ್ಪಟ್ಟರೆ ಮಾತ್ರ ಸುಂಕ ವಾಪಸ್’
‘ವಿಶ್ವ ಶಾಂತಿ ಅಪಾಯದಲ್ಲಿದೆ. ಆದ್ದರಿಂದ ಈಗ ಡೆನ್ಮಾರ್ಕ್ ದೇಶವು ಗ್ರೀನ್‌ಲ್ಯಾಂಡ್ ಅನ್ನು ಹಿಂತಿರುಗಿಸುವ ಸಮಯ ಬಂದಿದೆ’ ಎಂದು ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮ ‘ಟ್ರೂಥ್’ನಲ್ಲಿ ತಿಳಿಸಿದ್ದಾರೆ. ‘ಇದರಲ್ಲಿ ಭಾಗಿಯಾಗಿರುವ ದೇಶಗಳೊಂದಿಗೆ ಮಾತುಕತೆ ನಡೆಸಲು ತಮ್ಮ ಆಡಳಿತವು ತಕ್ಷಣವೇ ಮುಕ್ತವಾಗಿದೆ. ಗ್ರೀನ್‌ಲ್ಯಾಂಡ್‌ನ ಸಂಪೂರ್ಣ ಖರೀದಿಗೆ ಒಪ್ಪಂದ ಏರ್ಪಟ್ಟಾಗ ಮಾತ್ರ ಈ ಸುಂಕಗಳನ್ನು ಕೊನೆಗೊಳಿಸಲಾಗುವುದು’ ಎಂದು ಹೇಳಿದ್ದಾರೆ.