ಪೆನ್ಸಿಲ್ವೇನಿಯಾ: ಅಮೆರಿಕಕ್ಕೆ ಆಮದಾಗುವ ಉಕ್ಕಿನ ಮೇಲಿನ ಸುಂಕವನ್ನು ಶೇಕಡ 25ರಿಂದ ಶೇಕಡ 50ಕ್ಕೆ ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

ಪೆನ್ಸಿಲ್ವೇನಿಯಾದ ಪಿಟ್ಸ್ಬರ್ಗ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಈ ಕ್ರಮವು ದೇಶಿಯ ಉಕ್ಕು ಉದ್ಯಮವನ್ನು ಉತ್ತೇಜಿಸಲು ಮತ್ತು ರಾಷ್ಟ್ರೀಯ ಪೂರೈಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚೀನಾದ ಮೇಲಿನ ಅವಲಂಬನೆಯನ್ನೂ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

‘2018ರಲ್ಲಿ ಅಧಿಕಾರಕ್ಕೆ ಬಂದಾಗ ಉಕ್ಕಿನ ಆಮದು ಸುಂಕವನ್ನು ಶೇ 25ಕ್ಕೆ ಹೆಚ್ಚಿಸುವ ಮೂಲಕ ಪಿಟ್ಸ್ಬರ್ಗ್ನಲ್ಲಿರುವ ಅತಿದೊಡ್ಡ ಉಕ್ಕು ತಯಾರಕ ಕಂಪನಿ ‘ಯುಎಸ್ ಸ್ಟೀಲ್’ ಅನ್ನು ಉಳಿಸಿದ್ದೆ’ ಎಂದು ಟ್ರಂಪ್ ಇದೇ ವೇಳೆ ಹೇಳಿದ್ದಾರೆ.

ಅಮೆರಿಕದಲ್ಲಿ ಉಕ್ಕಿನ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಾಗಿದೆ. ಜನವರಿಯಲ್ಲಿ ಟ್ರಂಪ್ ಅಧಿಕಾರಕ್ಕೆ ಮರಳಿದ ನಂತರ ಉಕ್ಕಿನ ಬೆಲೆ ಶೇ 16 ರಷ್ಟು ಹೆಚ್ಚಾಳವಾಗಿದೆ.

ಮಾರ್ಚ್ 2025ರ ಹೊತ್ತಿಗೆ, ಅಮೆರಿಕದಲ್ಲಿ ಉಕ್ಕಿನ ಬೆಲೆ ಮೆಟ್ರಿಕ್ ಟನ್ಗೆ 984 ಅಮೆರಿಕನ್ ಡಾಲರ್ ಆಗಿದ್ದು, ಇದು ಯುರೋಪ್ ($690) ಮತ್ತು ಚೀನಾಕ್ಕೆ ($392) ಹೋಲಿಸಿದರೆ ಅತ್ಯಂತ ಹೆಚ್ಚು ಎಂದು ಅಮೆರಿಕ ವಾಣಿಜ್ಯ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.