ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರ ಬಳಸಿ ಚೀನಾದ ಮಹಾಗೋಡೆ ಅಗೆದ ವ್ಯಕ್ತಿಗಳ ಬಂಧನ

Published 5 ಸೆಪ್ಟೆಂಬರ್ 2023, 12:54 IST
Last Updated 5 ಸೆಪ್ಟೆಂಬರ್ 2023, 12:54 IST
ಅಕ್ಷರ ಗಾತ್ರ

ಬೀಜಿಂಗ್‌ : ಯಂತ್ರ ಬಳಸಿ ಚೀನಾದ ಮಹಾಗೋಡೆಯ ಒಂದು ಭಾಗವನ್ನು ಅಗೆದ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಬಿಬಿಸಿ ವರದಿ ಮಾಡಿದೆ.

ಮಹಾಗೋಡೆಗೆ ಹಾನಿ ಮಾಡಿದ ಕಾರಣಕ್ಕೆ ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ 38 ವರ್ಷದ ಪುರುಷ ಮತ್ತು 55 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ನಿರ್ಮಾಣ ಕಾರ್ಯದ ಜಾಗಕ್ಕೆ ಒಳ ದಾರಿ (ಶಾರ್ಟ್‌ಕಟ್‌ ವೇ) ಮಾಡಲು ಮಹಾ ಗೋಡೆಯನ್ನು ಅಗೆದಿದ್ದಾರೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಯಾಣದ ದೂರವನ್ನು ಉಳಿಸುವ ಸಲುವಾಗಿ ತಮ್ಮ ಅಗೆಯುವ ಯಂತ್ರ ಹಾದುಹೋಗುವಷ್ಟು ಅಗಲವಾಗಿ ಗೋಡೆಯನ್ನು ಅಗೆದಿದ್ದಾರೆ. ಇದರಿಂದ ಸರಿಪಡಿಸಲಾಗದಷ್ಟು ಗೋಡೆಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಆಗಸ್ಟ್ 24 ರಂದು ಸ್ಥಳೀಯರಿಂದ ದೂರು ಸ್ವೀಕರಿಸಿದ Yuyou ಕೌಂಟಿಯ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಚೂಪಾದ ವಸ್ತುವಿನಿಂದ ಗೋಡೆಗೆ ಹಾನಿ ಮಾಡಿದ್ದಕ್ಕಾಗಿ 2021ರಲ್ಲಿ ಮೂವರು ಪ್ರವಾಸಿಗರನ್ನು ಬಂಧಿಸಿ ದಂಡ ವಿಧಿಸಿಲಾಗಿತ್ತು. ನಿರ್ಮಾಣ ಹಂತದಲ್ಲಿದ್ದ ಮುಟಿಯಾನ್ಯು ಭಾಗದಲ್ಲಿ ಅತಿಕ್ರಮಣ ಮಾಡಿದ್ದಕ್ಕಾಗಿ ಇಬ್ಬರು ವಿದೇಶಿ ಪ್ರವಾಸಿಗರನ್ನೂ ಪೊಲೀಸರು ಬಂಧಿಸಿದ್ದರು.

ಮಹಾಗೋಡೆಯ ಕಿರು ಪರಿಚಯ

2,700 ವರ್ಷಗಳಷ್ಟು ಇತಿಹಾಸ ಹೊಂದಿರುವ ಚೀನಾದ ಮಹಾಗೋಡೆಯ ಮೊದಲ ಭಾಗವನ್ನು ಕಟ್ಟಿಸಿದವರು ಚೌ ಮನೆತನದ ಅರಸರು. ಮೊದಲಿಗೆ ಈ ಗೋಡೆಯನ್ನು ತುಂಡು ತುಂಡಾಗಿ ಕಟ್ಟಲಾಗಿತ್ತು. ಚೀನಿ ಚಕ್ರವರ್ತಿ ಚಿನ್ ಹ್ವಾಂಗ್ (ಕ್ರಿ.ಪೂ. 320-306) ಇಂಥ ಹಲವಾರು ಗೋಡೆಗಳನ್ನು ಒಂದುಮಾಡಿ ಅದಕ್ಕೊಂದು ಅಖಂಡ ರೂಪ ಕೊಟ್ಟು ಮಹಾಗೋಡೆಯಾಗಿಸಿದ. ಇದನ್ನು ಕೆಲವೆಡೆ ಇಟ್ಟಿಗೆಯಿಂದ ಕಟ್ಟಿದರೆ ಇನ್ನು ಕೆಲವೆಡೆ ಕಲ್ಲಿಂದ ಕಟ್ಟಲಾಗಿದೆ.

ಈ ಗೋಡೆ ಕಟ್ಟಿದಾಗ ಒಟ್ಟು 8851 ಕಿ.ಮೀ ಉದ್ದವಿತ್ತು. ಹಲವು ದಾಳಿಗೆ ಒಳಗಾಗಿ ಇದೀಗ 2800 ಕಿ.ಮೀ. ಉದ್ದವಿದೆ. ಗೋಡೆಯು 8 ಮೀಟರ್ ಎತ್ತರ, 7 ಮೀಟರ್ ಅಗಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT