ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಮಾಸ್‌ನ ಇಬ್ಬರು ಕಮಾಂಡರ್‌ಗಳ ಹತ್ಯೆ

Published 14 ಅಕ್ಟೋಬರ್ 2023, 15:30 IST
Last Updated 14 ಅಕ್ಟೋಬರ್ 2023, 15:30 IST
ಅಕ್ಷರ ಗಾತ್ರ

ಟೆಲ್‌ ಅವೀವ್‌: ಗಾಜಾ ಮೇಲೆ ನಡೆಸಿದ ದಾಳಿಯಲ್ಲಿ ಹಮಾಸ್‌ನ ಇಬ್ಬರು ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ರಕ್ಷಣಾ ಪಡೆ (ಐಡಿಎಫ್‌) ಶನಿವಾರ ತಿಳಿಸಿದೆ. 

ಈ ಇಬ್ಬರೂ ಇಸ್ರೇಲ್‌ ಮೇಲೆ ಈಚೆಗೆ ನಡೆದಿದ್ದ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ‘ದ ಟೈಮ್ಸ್‌ ಆಫ್‌ ಇಸ್ರೇಲ್‌’ ವರದಿ ಮಾಡಿದೆ. 

ಡ್ರೋನ್‌ ದಾಳಿಯಲ್ಲಿ ನುಖ್ಬಾ ಕಮಾಂಡೊ ಘಟಕದ ಕಂಪನಿ ಕಮಾಂಡರ್‌ ಅಲಿ ಕ್ವಾದಿ ಮೃತಪಟ್ಟಿದ್ದಾರೆ.  ವ್ಯಾಪಾರಿಯ ಅಪಹರಣ ಮತ್ತು ಕೊಲೆ ಆರೋಪದ ಮೇಲೆ 2005ರಲ್ಲಿಇಸ್ರೇಲ್‌ ಇವರನ್ನು ಬಂಧಿಸಿತ್ತು. ಕೈದಿಗಳ ವಿನಿಮಯ ಅನ್ವಯ 2011ರಲ್ಲಿ ಬಿಡುಗಡೆ ಮಾಡಿ ಗಾಜಾ ಪಟ್ಟಿಗೆ ಕಳುಹಿಸಿತ್ತು.

ಶುಕ್ರವಾರ ರಾತ್ರಿ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ವೈಮಾನಿಕ ಕಾರ್ಯಾಚರಣೆಯ ಮುಖ್ಯಸ್ಥ ಮುರಾದ್‌ ಅಲ್‌ ಮುರಾದ್‌ ಮೃತಪಟ್ಟಿದ್ದಾರೆ.

ಇಸ್ರೇಲ್‌ ವಾಯುಪಡೆಯ (ಐಎಎಫ್‌) ಯುದ್ಧ ವಿಮಾನಗಳು ಗಾಜಾ ಪಟ್ಟಿಯಾದ್ಯಂತ ವ್ಯಾಪಕ ದಾಳಿ ನಡೆಸಿದವು. ಈ ಪೈಕಿ ಬಂಡುಕೋರರ ಅಡಗುತಾಣಗಳು ಅಲ್ಲದೆ ಹಮಾಸ್‌ನ ನುಖ್ಬಾ ಕಾರ್ಯಾಚರಣೆ ಕೇಂದ್ರ ಸೇರಿದಂತೆ ಸೇನಾ ಶಿಬಿರದ ಮೇಲೂ ದಾಳಿ ನಡೆಯಿತು ಎಂದು ಐಎಎಫ್‌ ‘ಎಕ್ಸ್‌’ನಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT