ಮ್ಯಾಡ್ರಿಡ್(ಸ್ಪೇನ್): ಹಳಿ ತಪ್ಪಿದ ಹೈಸ್ಪೀಡ್ ರೈಲೊಂದು ಪಕ್ಕದ ಹಳಿಯಲ್ಲಿ ಸಂಚರಿಸುತ್ತಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 21 ಜನರು ಮೃತಪಟ್ಟು, 100ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಕಾರ್ಡೋಬಾದ ಆಡಮುಜ್ ಬಳಿ ಭಾನುವಾರ ನಡೆದಿದೆ.

ಇಲ್ಲಿಯವರೆಗೆ 21 ಜನರು ಮೃತಟ್ಟಿದ್ದಾರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮ್ಯಾಡ್ರಿಡ್ನಿಂದ ಹುಯೆಲ್ವಾಗೆ ಸಂಚರಿಸುತ್ತಿದ್ದ ರೈಲಿನ ಲೋಕೋ ಪೈಲಟ್ ಕೂಡ ಮೃತರಲ್ಲಿ ಒಬ್ಬರು ಎಂದು ವರದಿಯಾಗಿದೆ.

‘ಮಲಗಾದಿಂದ ಮ್ಯಾಡ್ರಿಡ್ಗೆ ಸಂಚರಿಸುತ್ತಿದ್ದ ಇರಿಯೊ ರೈಲು ಆಡಮುಜ್ ಬಳಿ ಹಳಿ ತಪ್ಪಿದ್ದು, ಪಕ್ಕದ ಹಳಿಯಲ್ಲಿ ಸಂಚರಿಸುತ್ತಿದ್ದ ಮ್ಯಾಡ್ರಿಡ್ನಿಂದ ಹುಯೆಲ್ವಾಗೆ ಸಂಚರಿಸುತ್ತಿದ್ದ ರೆನ್ಫೆ ರೈಲಿಗೆ ಡಿಕ್ಕಿ ಹೊಡೆದಿದೆ’ ಎಂದು ರೈಲ್ವೆ ಇಲಾಖೆಯ ಅಧಿಕಾರಿ ಅದಿಫ್ ತಿಳಿಸಿದ್ದಾರೆ.

ಇರಿಯೊ ರೈಲು ಕಾರ್ಡೋಬಾದಿಂದ ಮ್ಯಾಡ್ರಿಡ್ ಕಡೆಗೆ ಹೊರಟ ಸುಮಾರು 10 ನಿಮಿಷಗಳ ನಂತರ ಸಂಜೆ 6:40ಕ್ಕೆ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಇರಿಯೊ ರೈಲಿನಲ್ಲಿ 300ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ರೆನ್ಫೆ ರೈಲಿನಲ್ಲಿ ಸುಮಾರು 100 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಸದ್ಯ, ಮ್ಯಾಡ್ರಿಡ್ ಮತ್ತು ಆಂಡಲೂಸಿಯಾ ನಡುವೆ ಎಲ್ಲಾ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.