ಅಬುಧಾಬಿ: ಸಂಯುಕ್ತ ಅರಬ್ ಸಂಸ್ಥಾನದ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರು ತಮ್ಮ ಹಿರಿಯ ಪುತ್ರ ಶೇಖ್ ಖಾಲಿದ್ ಅವರನ್ನು ಅಬುಧಾಬಿಯ ರಾಜಕುಮಾರನನ್ನಾಗಿ ನೇಮಕ ಮಾಡಿದ್ದಾರೆ.

ಜತೆಗೆ ತಮ್ಮ ಸಹೋದರ ಶೇಖ್ ಮನ್ಸೂರ್ ಬಿನ್ ಝಾಯೇದ್ ಅಲ್ ನಹ್ಯಾನ್ ಹಾಗೂ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಅವರನ್ನು ಯುಎಇಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

52 ವರ್ಷದ ಮನ್ಸೂರ್ ಅವರು ಖ್ಯಾತ ಫುಟ್‌ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಸಿಟಿ ಕ್ಲಬ್‌ನ ಮಾಲೀಕರಾಗಿದ್ದಾರೆ.

ಸದ್ಯ ಯುಎಇಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ADQ ಸಾರ್ವಭೌಮ ಸಂಪತ್ತು ನಿಧಿಯ ಅಧ್ಯಕ್ಷರಾಗಿರುವ ತಮ್ಮೊಬ್ಬ ಸಹೋದರ ಶೇಖ್ ತಹ್ನೌನ್ ಹಾಗೂ ಹಜ್ಜಾ ಬಿನ್ ಝಾಯೇದ್ ಅವರನ್ನು ಅಬುಧಾಬಿಯ ಉಪ ಆಡಳಿತಗಾರನನ್ನಾಗಿ ನೇಮಕ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.