ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈಝರ್ ಲಸಿಕೆಯಿಂದ ಅಡ್ಡಪರಿಣಾಮ; ಅಲರ್ಜಿ ಹಿನ್ನೆಲೆ ಉಳ್ಳವರಿಗೆ ಎಚ್ಚರಿಕೆ!

Last Updated 10 ಡಿಸೆಂಬರ್ 2020, 6:25 IST
ಅಕ್ಷರ ಗಾತ್ರ

ಲಂಡನ್: ಫೈಝರ್-ಬಯೋಎನ್‌ಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್-19 ಬಳಕೆಗೆ ಬ್ರಿಟನ್ ಸರ್ಕಾರ ಅನುಮೋದನೆ ನೀಡಲಾಗಿತ್ತು. ಈಗ ಫೈಝರ್ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ವರದಿಯಾಗಿದೆ.

ಬ್ರಿಟಿಷ್‌ ಔಷಧ ನಿಯಂತ್ರಕರು ಈ ಬಗ್ಗೆ ಎಚ್ಚರಿಕೆಯನ್ನು ರವಾನಿಸಿದ್ದು, ಅಲರ್ಜಿಗೆ ಒಳಗಾಗುವ ಜನರು ಕೋವಿಡ್ 19 ವೈರಸ್‌ಗೆ ನೀಡಲಾಗುವ ಲಸಿಕೆ ತೆಗೆದುಕೊಳ್ಳದಂತೆ ಸೂಚಿಸಿದೆ.

ಔಷಧಿ, ಆಹಾರ ಅಥವಾ ಅಲರ್ಜಿ (Anaphylaxis) ಪ್ರತಿ ಪರಿಣಾಮ ಹೊಂದಿರುವವರು ಫೈಝರ್ ಬಯೋಎನ್‌ಟೆಕ್ ಕೋವಿಡ್ 19 ಲಸಿಕೆ ಪಡೆಯಬಾರದು ಎಂದು ಬ್ರಿಟನ್ ಔಷಧ ನಿಯಂತ್ರಕ ಸೂಚಿಸಿದೆ.

ಬ್ರಿಟನ್‌ನಲ್ಲಿ ವಯಸ್ಸಾದವರು, ಮುಂಚೂಣಿಯ ಕೊರೊನಾ ಹೋರಾಟಗಾರರಿಗೆ ಮಂಗಳವಾರದಿಂದ ಲಸಿಕೆ ವಿತರಣೆ ಪ್ರಾರಂಭಿಸಿತ್ತು. ಲಸಿಕೆ ವಿತರಣೆ ಆರಂಭವಾದ ಬಳಿಕ ಎರಡು ಅಲರ್ಜಿ ಪ್ರಕರಣಗಳು ವರದಿಯಾಗಿದೆ ಎಂದು ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೇನ್ಸಿ (ಎಂಎಚ್‌ಆರ್‌ಎ) ವರದಿ ಮಾಡಿದೆ.

ಹಾಗಾಗಿ ಅಲರ್ಜಿ ಇತಿಹಾಸ ಹೊಂದಿರುವ ಯಾವುದೇ ವ್ಯಕ್ತಿಯು ಫೈಜರ್ ಬಯೋಎನ್‌ಟೆಕ್ ಲಸಿಕೆಯನ್ನು ಪಡೆಯಬಾರದು ಎಂದು ಎಂಎಚ್‌ಆರ್‌ಎ ಕಾರ್ಯ ನಿರ್ವಾಹಕ ಜೂನ್ ರೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ಹೆಚ್ಚಿನ ಜನರಿಗೆ ಅಲರ್ಜಿ ತೊಂದರೆಗಳು ಎದುರುಗಾವುದಿಲ್ಲ. ಹಾಗೆಯೇ ಲಸಿಕೆಯು ಎಂಎಚ್‌ಆರ್ ಸುರಕ್ಷತೆ, ಗುಣಮಟ್ಟ ಮಾನದಂಡಗಳನ್ನು ಹೊಂದಿದ್ದು, ಸಂಪೂರ್ಣವಾಗಿ ವಿಶ್ವಾಸಾರ್ಹವಾಗಿದೆ' ಎಂದಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT