ಲಂಡನ್: ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿಪದವೀಧರರು ಹೊಸ ಹೈ ಪೊಟೆನ್ಶಿಯಲ್ ಇಂಡಿವಿಜುವಲ್ (ಎಚ್‌ಪಿಐ) ವೀಸಾದಡಿ ಬ್ರಿಟನ್‌ಗೆ ವಲಸೆ ಬಂದು ನೌಕರಿ ಮಾಡುವ ಅವಕಾಶದಯೋಜನೆಯನ್ನು ಸೋಮವಾರ ಲಂಡನ್‌ನಲ್ಲಿ ಪ್ರಾರಂಭಿಸಲಾಯಿತು.
ಬ್ರಿಟನ್ ಹೊರತಾಗಿ ಭಾರತ ಸೇರಿ ವಿಶ್ವದ ಅಗ್ರ 50 ವಿಶ್ವವಿದ್ಯಾಲಯಗಳ ಪದವೀಧರರುಎಚ್‌ಪಿಐ ವೀಸಾ ಮೂಲಕ ಬ್ರಿಟನ್‌ಗೆ ಪ್ರಯಾಣಿಸಬಹುದಾಗಿದೆ.ಬ್ರೆಕ್ಸಿಟ್ ನಂತರದ ಪಾಯಿಂಟ್-ಆಧಾರಿತ ಉತ್ತೇಜಕ ವರ್ಗದ ಎಚ್‌ಪಿಐ ವೀಸಾ ವ್ಯವಸ್ಥೆಯು ಯಾವುದೇ ರಾಷ್ಟ್ರೀಯತೆ ಲೆಕ್ಕಿಸದೇ ವಿಶ್ವದಾದ್ಯಂತದ ಅತ್ಯುತ್ತಮ ಮತ್ತು ಉಜ್ವಲ ಪ್ರತಿಭೆಗಳನ್ನು ದೇಶಕ್ಕೆ ಆಕರ್ಷಿಸುವ ಗುರಿ ಹೊಂದಿದೆ ಎಂದುಭಾರತೀಯ ಮೂಲದ ಬ್ರಿಟನ್ ಸಂಪುಟ ಸಚಿವರಾದ ರಿಷಿ ಸುನಕ್ ಮತ್ತು ಪ್ರೀತಿ ಪಟೇಲ್ ಹೇಳಿದರು.
‘ಅರ್ಹ ಪದವೀಧರರಿಗೆ ಎರಡು ವರ್ಷಗಳ ಕೆಲಸದ ವೀಸಾ ನೀಡಲಾಗುತ್ತದೆ. ಪಿಎಚ್.ಡಿ ಹೊಂದಿರುವವರಿಗೆ ಮೂರು ವರ್ಷಗಳ ವೀಸಾ ನೀಡಲಾಗುತ್ತದೆ. ನಿರ್ದಿಷ್ಟ ಉದ್ಯೋಗ ಪ್ರಸ್ತಾಪದ ಅಗತ್ಯವಿಲ್ಲ. ಈ ಹೊಸ ವೀಸಾ ಕೊಡುಗೆಯು ಬ್ರಿಟನ್‌ಗೆ ವಿಶ್ವದೆಲ್ಲೆಡೆಯಿಂದ ಅತ್ಯುತ್ತಮ ಮತ್ತು ಉಜ್ವಲ ಪ್ರತಿಭೆಗಳನ್ನು ಆಕರ್ಷಿಸುವುದನ್ನು ಮುಂದುವರಿಸಲಿದೆ’ ಎಂದು ರಿಷಿ ಸುನಕ್ ಹೇಳಿದರು.
‘ನಮ್ಮ ಅಂಕ ಆಧರಿತ ವಲಸೆ ವ್ಯವಸ್ಥೆಯ ಭಾಗವಾಗಿ ಈ ಹೊಸ ಮತ್ತು ಉತ್ತೇಜಕ ಅವಕಾಶವನ್ನು ಪ್ರಾರಂಭಿಸಿದ್ದು ಹೆಮ್ಮೆ ಎನಿಸುತ್ತದೆ. ಇದರಲ್ಲಿ ಸಾಮರ್ಥ್ಯ ಮತ್ತು ಪ್ರತಿಭೆಗೆ ಮೊದಲ ಅವಕಾಶ, ಯಾರು ಎಲ್ಲಿಂದ ಬರುತ್ತಾರೆ ಎನ್ನುವುದು ಮುಖ್ಯವಲ್ಲ’ ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿದರು.