ಕೀವ್: ‘ಮೂರು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್–ರಷ್ಯಾ ಯುದ್ಧವನ್ನು ಅಂತ್ಯಗಾಣಿಸುವ ಸಂಬಂಧ ಉಕ್ರೇನ್ ಮತ್ತು ಅಮೆರಿಕ ಮಧ್ಯೆ ಸೌದಿ ಅರೇಬಿಯಾದಲ್ಲಿ ಮಂಗಳವಾರ ಮಾತುಕತೆ ನಡೆಯಲಿದೆ’ ಎಂದು ಉಕ್ರೇನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮಾತುಕತೆ ವೇಳೆ ಉಕ್ರೇನ್ ತನ್ನ ಪರವಾಗಿ ಕೆಲವು ಒತ್ತಾಯಗಳನ್ನು ಮುಂದಿಡಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ. ‘ಯುದ್ಧ ಅಂತ್ಯಗೊಳಿಸುವ ಬಗ್ಗೆ ರಷ್ಯಾದೊಂದಿಗೆ ಮಾತುಕತೆ ಆರಂಭ ಮಾಡಬೇಕು ಎಂದರೆ, ಮೊದಲು ಆ ದೇಶವು ವಾಯು ಹಾಗೂ ನೌಕಾ ದಾಳಿಗಳಿಗೆ ಕದನವಿರಾಮ ಘೋಷಿಸಬೇಕು’ ಎನ್ನುವುದು ಉಕ್ರೇನ್ನ ವಾದವಾಗಿರಲಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯೆ ಶ್ವೇತಭವನದಲ್ಲಿ ಈಚೆಗೆ ನಡೆದಿದ್ದ ವಾಗ್ವಾದದ ಬಳಿಕ, ಉಕ್ರೇನ್–ಅಮೆರಿಕ ನಡುವಿನ ಮೊದಲ ಮಾತುಕತೆ ಇದಾಗಿರಲಿದೆ.

ಜೆದ್ದಾಗೆ ಬಂದಿಳಿದ ಝೆಲೆನ್ಸ್ಕಿ:

ಅಮೆರಿಕದ ಉನ್ನತ ಅಧಿಕಾರಿಗಳ ಜತೆಗಿನ ಮಾತುಕತೆಗೆ ಝೆಲೆನ್ಸ್ಕಿ ಅವರು ಸೋಮವಾರ ರಾತ್ರಿ ಸೌದಿ ಅರೇಬಿಯಾದ ಜೆದ್ದಾಗೆ ಬಂದಿಳಿದರು. ಅಮೆರಿಕದ ಜತೆಗಿನ ಮಾತುಕತೆಗೂ ಮುನ್ನ ಅವರು ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಉಕ್ರೇನ್ನ ನಿಯೋಗದಲ್ಲಿರುವ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.