ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾ ಎದುರಿಸಲು ನೆರವಿಗಾಗಿ ಬಾಲ್ಟಿಕ್‌ ದೇಶಕ್ಕೆ ಝೆಲೆನ್‌ಸ್ಕಿ ಭೇಟಿ

Published 10 ಜನವರಿ 2024, 21:13 IST
Last Updated 10 ಜನವರಿ 2024, 21:13 IST
ಅಕ್ಷರ ಗಾತ್ರ

ಕೀವ್‌: ರಷ್ಯಾ ವಿರುದ್ಧ ಮತ್ತಷ್ಟು ಹೆಚ್ಚಿನ ಬೆಂಬಲ ಕ್ರೋಡೀಕರಿಸಲು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಬುಧವಾರ ಬಾಲ್ಟಿಕ್‌ ದೇಶಗಳಿಗೆ ಭೇಟಿ ಕೈಗೊಂಡರು.

22 ತಿಂಗಳುಗಳಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ರಷ್ಯಾ ಇತ್ತೀಚೆಗೆ ಉಕ್ರೇನ್‌ ಮೇಲೆ ಕ್ಷಿಪಣಿ ದಾಳಿ ತೀವ್ರಗೊಳಿಸಿರುವ ಬೆನಲ್ಲೇ ಝೆಲೆನ್‌ಸ್ಕಿ ಅವರು ಎಸ್ಟೋನಿಯಾ ಮತ್ತು ಲಾಟ್ವಿಯಾಕ್ಕೆ ಭೇಟಿ ನೀಡುವ ಮೊದಲು ಲಿಥುವೇನಿಯಾಗೆ ಬುಧವಾರ ಭೇಟಿ ನೀಡಿದರು. 

‘ನಾವು ವ್ಲಾಡಿಮಿರ್‌ ಪುಟಿನ್‌ನನ್ನು ಮುಗಿಸದೇ ರಷ್ಯಾ ಯುದ್ಧ ನಿಲ್ಲಿಸುವುದಿಲ್ಲ. ಉಕ್ರೇನ್‌ ಜತೆಗೆ ನೆರೆಹೊರೆಯವರ ಮೇಲೂ ದಾಳಿ ಮಾಡುವುದು ನಿಲ್ಲವುದಿಲ್ಲ. ಉಕ್ರೇನ್‌ ನಂತರ, ಪುಟಿನ್‌ ಮುಂದಿನ ದಾಳಿಯ ಗುರಿ ಲಿಥುವೇನಿಯಾ, ಲಾತ್ವಿಯಾ, ಎಸ್ಟೋನಿಯಾ, ಮಾಲ್ಡೊವಾ ಆಗಿರಲಿದೆ’ ಎಂದು ಝೆಲೆನ್‌ಸ್ಕಿ ಲಿಥುವೇನಿಯಾದ ರಾಜಧಾನಿ ವಿಲ್ನಿಯಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಯುರೋಪ್‌ ಒಕ್ಕೂಟ ಮತ್ತು ನ್ಯಾಟೊ ಸೇರ್ಪಡೆಯ ಆಶಯ ಈಡೇರಿಕೆ, ಡ್ರೋನ್‌ ಮತ್ತು ಎಲೆಕ್ಟ್ರಾನಿಕ್‌ ಯುದ್ಧಾಸ್ತ್ರಗಳ ಉತ್ಪಾದನೆಯ ಸಾಮ‌ರ್ಥ್ಯ ಹಾಗೂ ಭದ್ರತೆ ವಿಚಾರಗಳಲ್ಲಿ ಸಹಭಾಗಿತ್ವ ನಿರ್ಮಿಸುವುದು ಬಾಲ್ಟಿಕ್‌ ಪ್ರವಾಸದ ಕೇಂದ್ರಬಿಂದುವಾಗಿದೆ ಎಂದು ಝೆಲೆನ್‌ಸ್ಕಿ ಟೆಲಿಗ್ರಾಮ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಬಾಲ್ಟಿಕ್‌ ದೇಶಗಳು ಉಕ್ರೇನ್‌ಗೆ ಈ ಹಿಂದಿನಿಂದಲೂ ದೃಢವಾದ ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಬೆಂಬಲ ನೀಡುತ್ತಾ ಬಂದಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT