ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧದಲ್ಲಿ 500 ಮಕ್ಕಳನ್ನು ಕೊಂದ ರಷ್ಯಾ: ಝೆಲೆನ್‌ಸ್ಕಿ

Published 4 ಜೂನ್ 2023, 14:21 IST
Last Updated 4 ಜೂನ್ 2023, 14:21 IST
ಅಕ್ಷರ ಗಾತ್ರ

ಕೀವ್‌: ರಷ್ಯಾ ನಡೆಸುತ್ತಿರುವ ಯುದ್ಧ 16ನೇ ತಿಂಗಳಿಗೆ ಕಾಲಿಟ್ಟಿದ್ದು, ಈ ಯುದ್ಧದಲ್ಲಿ ಉಕ್ರೇನ್‌ನ ಸುಮಾರು 500 ಮಕ್ಕಳನ್ನು ರಷ್ಯಾ ಸೇನೆ ಕೊಂದಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಭಾನುವಾರ ಹೇಳಿದರು.

ರಷ್ಯಾದ ಇತ್ತೀಚಿನ ದಾಳಿಯಲ್ಲಿ ಮೃತಪಟ್ಟ 2 ವರ್ಷದ ಬಾಲಕಿಯ ಶವವನ್ನು ರಕ್ಷಣಾ ಸಿಬ್ಬಂದಿ ಪತ್ತೆ ಮಾಡಿದ ಬಳಿಕ ಝೆಲೆನ್‌ಸ್ಕಿ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.

‘ಸದ್ಯ ಯುದ್ಧದಲ್ಲಿ ಮಡಿದವರ ಮತ್ತು ಕೆಲವು ಪ್ರದೇಶಗಳು ರಷ್ಯಾದ ವಶದಲ್ಲಿರುವ ಕಾರಣ ಮಕ್ಕಳ ಸಾವುನೋವಿನ ನಿಖರ ಸಂಖ್ಯೆ ಗುರುತಿಸುವುದು ಅಸಾಧ್ಯವಾಗಿದೆ. ರಷ್ಯಾದ ಶಸ್ತ್ರಾಸ್ತ್ರಗಳು ಪ್ರತಿ ದಿನವು ಉಕ್ರೇನ್‌ ಮಕ್ಕಳ ಜೀವ ತೆಗೆಯುತ್ತಲೇ ಇದೆ. ಕಳೆದ ವರ್ಷದ ಫೆ.24ರಿಂದ ರಷ್ಯಾ ಪೂರ್ಣ ಪ್ರಮಾಣದ ದಾಳಿ ಆರಂಭಿಸಿದ ನಂತರ ನೂರಾರು ಮಕ್ಕಳನ್ನು ಕೊಂದು ಹಾಕಿದೆ. ಜೀವತೆತ್ತ ಈ ಮಕ್ಕಳಲ್ಲಿ ಹಲವರು ಪ್ರಸಿದ್ಧ ವಿದ್ವಾಂಸರು, ಕಲಾವಿದರು, ಕ್ರೀಡಾ ಚಾಂಪಿಯನ್ನರಾಗಿ ದೇಶದ ಇತಿಹಾಸಕ್ಕೆ ಕೊಡುಗೆ ನೀಡುತ್ತಿದ್ದರು’ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

‘ನಾವು ಈ ಯುದ್ಧವನ್ನು ಜಯಿಸಬೇಕು. ಉಕ್ರೇನ್‌ನ ಎಲ್ಲ ಮಕ್ಕಳು, ಎಲ್ಲ ಜನತೆಯೂ ರಷ್ಯಾದ ಭಯೋತ್ಪಾದನೆಯಿಂದ ಮುಕ್ತರಾಗಬೇಕು, ಅದಕ್ಕಾಗಿ ನಾವು ಯುದ್ಧ ಗೆಲ್ಲಲೇಬೇಕು’ ಎಂದು ಅವರು ಹೇಳಿದ್ದಾರೆ.

ಕೀವ್‌ ಸೇರಿ ಹಲವೆಡೆ ದಾಳಿ

ನಿಪ್ರೊ ನಗರದ ಹೊರವಲಯದಲ್ಲಿ ನೆಲಸಮವಾಗಿದ್ದ ವಸತಿ ಸಮುಚ್ಚಯದ ಅವಶೇಷಗಳಡಿ ಭಾನುವಾರ ಎರಡು ವರ್ಷದ ಬಾಲಕಿಯ ಶವವನ್ನು ರಕ್ಷಣಾ ಸಿಬ್ಬಂದಿ ಹೊರ ತೆಗೆದರು. 

ರಷ್ಯಾ ಪಡೆಗಳು, ಕೀವ್‌ ನಗರ ಸೇರಿ ಉಕ್ರೇನ್‌ನ ಅನೇಕ ಪ್ರದೇಶಗಳನ್ನು ಗುರಿಯಾಗಿಸಿ ಭಾನುವಾರ ಡ್ರೋನ್ ಮತ್ತು ಕ್ರೂಸ್ ಕ್ಷಿಪಣಿಗಳ ದಾಳಿ ನಡೆಸಿವೆ. ಶನಿವಾರದ ದಾಳಿಯಲ್ಲಿ ಐವರು ಮಕ್ಕಳು ಸೇರಿ 22 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಸೆರಿಯಿ ಲಿಸಕ್ ತಿಳಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT