ಕಾಬೂಲ್: ಕಳೆದ 10 ವರ್ಷಗಳಲ್ಲಿ ಹಿಂಸಾಕೃತ್ಯಗಳಿಗೆ ಅಫ್ಗಾನಿಸ್ತಾನದ 1 ಲಕ್ಷ ನಾಗರಿಕರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. ಕಳೆದ 18 ವರ್ಷಗಳಿಂದ ತಾಲಿಬಾನ್ ವಿರುದ್ಧ ಯುದ್ಧ ನಡೆಯುತ್ತಿದ್ದು, ಸಾವು– ನೋವುಗಳನ್ನು ಅದು ದಾಖಲಿಸಿದೆ.

‘ಹಿಂಸೆಯನ್ನು ಕೊನೆಗಾಣಿಸುವ ಒಪ್ಪಂದ’ಕ್ಕೆ ಇದೇ 29ರಂದುಅಮೆರಿಕ– ತಾಲಿಬಾನ್ ಸಹಿ ಹಾಕಲಿವೆ. ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಯಾಗುವ ದಿಸೆಯಿಂದ ವಿಶ್ವಸಂಸ್ಥೆಯು ಈ ವರದಿಯನ್ನು ಶನಿವಾರ ಬಿಡುಗಡೆ ಮಾಡಿದೆ.

‘ನಡೆಯುತ್ತಿರುವ ಹಿಂಸೆಯಿಂದ ಬಹುತೇಕ ಅಫ್ಗಾನಿಸ್ತಾನದ ಯಾವೊಬ್ಬ ನಾಗರಿಕನು ಪಾರಾಗಿಲ್ಲ. ಒಂದಲ್ಲಾ ಒಂದು ಮಾದರಿಯಲ್ಲಿ ಹಿಂಸೆಗೊಳಗಾಗಿದ್ದಾನೆ. ಎಲ್ಲ ನಾಗರಿಕರನ್ನು ರಕ್ಷಿಸುವ ಮತ್ತು ಶಾಂತಿ ಸ್ಥಾಪನೆಯ ಪ್ರಯತ್ನಗಳು ಇದೀಗ ನಡೆಯುತ್ತಿವೆ’ ಎಂದು ಅಫ್ಗಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ತಡಮಿಶಿ ಯಾಮಮೊಟೊ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.