ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಿಂದ 100 ಸಿಬ್ಬಂದಿ ಕಜಕಸ್ತಾನಕ್ಕೆ ಸ್ಥಳಾಂತರ: ವಿಶ್ವಸಂಸ್ಥೆ

Last Updated 19 ಆಗಸ್ಟ್ 2021, 6:00 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ಅಫ್ಗಾನಿಸ್ತಾನದಲ್ಲಿನ ಸದ್ಯದ ಪರಿಸ್ಥಿತಿ ಮತ್ತು ಭದ್ರತೆಯ ದೃಷ್ಟಿಯಿಂದ 100 ಸಿಬ್ಬಂದಿಯನ್ನು ಕಜಕಸ್ತಾನಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌‌ ಅವರ ವಕ್ತಾರ ಸ್ಟೇಫನ್ ದುಜಾರಿಕ್‌ ತಿಳಿಸಿದ್ದಾರೆ.

‘ಅಫ್ಗಾನಿಸ್ತಾನದ ವಿಶ್ವಸಂಸ್ಥೆಯ ತಾತ್ಕಾಲಿಕ ಕಚೇರಿಯನ್ನು ಅಲ್ಮಾಟಿಯಲ್ಲಿ ಸ್ಥಾಪಿಸಲು ಅವಕಾಶ ಕಲ್ಲಿಸಿದ ಕಜಕಸ್ತಾನಕ್ಕೆ ಧನ್ಯವಾದಗಳು. ಸದ್ಯ ಅಧಿಕಾರಿಗಳು ಅಲ್ಲಿಂದಲೇ ಕಾರ್ಯನಿರ್ವಹಿಸಲಿದ್ದಾರೆ’ ಎಂದು ದುಜಾರಿಕ್‌ ಹೇಳಿದ್ದಾರೆ.

‘ಕಾಬೂಲ್‌ ಸೇರಿದಂತೆ ಅಫ್ಗಾನಿಸ್ತಾನದ ಇತರೆ ಭಾಗದಲ್ಲಿರುವ ವಿಶ್ವಸಂಸ್ಥೆಯ ಸಿಬ್ಬಂದಿಯನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಭವಿಷ್ಯದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಅವರು ಅಫ್ಗನ್‌ಗೆ ವಾಪಾಸ್‌ ಆಗಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಅಫ್ಗಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಉಪಸ್ಥಿತಿಯು ಭದ್ರತಾ ಪರಿಸ್ಥಿತಿ ಮೇಲೆ ಆಧಾರಿತವಾಗಿದೆ. ಆದರೆ, ಅಫ್ಗನ್‌ ನಾಗರಿಕರಿಗೆ ಯಾವುದೇ ಸಮಯದಲ್ಲಿ ನೆರವು ನೀಡಲು ನಾವು ಸಿದ್ಧರಿದ್ದೇವೆ’ ಎಂದು ಈ ಹಿಂದೆ ಗುಟೆರೆಸ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT