ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್–19 ಹೋರಾಟಕ್ಕೆ ಮತ್ತೊಂದು ಲಸಿಕೆಯ ಬಲ ದೊರೆತಿದೆ. ತುರ್ತು ಸಂದರ್ಭದ ಬಳಕೆಗಾಗಿ ಜಾನ್ಸನ್ ಆ್ಯಂಡ್ ಜಾನ್ಸನ್ ಕೋವಿಡ್ ಲಸಿಕೆಗೆ ಅನುಮತಿ ನೀಡಲಾಗಿದೆ.

ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಅಮೆರಿಕದಲ್ಲಿ 5,00,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 'ಹೊಸ ಸ್ವರೂಪದ ಕೊರೊನಾ ವೈರಸ್ ಸೇರಿದಂತೆ ಕೋವಿಡ್–19 ನಿಯಂತ್ರಣದಲ್ಲಿ ಲಸಿಕೆಯ ಬಳಕೆ ಪರಿಣಾಮಕಾರಿಯಾಗಲಿದೆ' ಎಂದು ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಎಫ್ಡಿಎ ಹೇಳಿದೆ.

ಅಮೆರಿಕದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅನುಮತಿ ದೊರೆತಿರುವ ಮೂರನೇ ಲಸಿಕೆ ಇದಾಗಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಫೈಝರ್ ಮತ್ತು ಮಾಡರ್ನಾ ಲಸಿಕೆಗಳಿಗೆ ಅನುಮತಿ ನೀಡಲಾಗಿತ್ತು.

ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಈ ಲಸಿಕೆಯ ಒಂದು ಡೋಸ್ ಹಾಕಿಸಿಕೊಂಡರೆ ಸಾಕಾಗುತ್ತದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಯನ್ನು ಸಾಮಾನ್ಯ ಫ್ರಿಡ್ಜ್ ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಬಹುದಾಗಿದೆ, ಇದರಿಂದಾಗಿ ಸಾಗಣೆ ಮತ್ತು ಸಂಗ್ರಹ ಸರಳವಾಗಲಿದೆ. ಈವರೆಗೂ ಅಮೆರಿಕದಲ್ಲಿ 6.5 ಕೋಟಿ ಜನರು ಫೈಝರ್ ಮತ್ತು ಮಾಡರ್ನಾ ಲಸಿಕೆ ಡೋಸ್ ಹಾಕಿಸಿಕೊಂಡಿದ್ದಾರೆ. ಆ ಎರಡೂ ಲಸಿಕೆಗಳೂ ಸುಮಾರು ಶೇ 95ರಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿಯಾಗಿದೆ.

'ಎಲ್ಲ ಅಮೆರಿಕನ್ನರಿಗೂ ಇದು ಒಳ್ಳೆಯ ಸುದ್ದಿಯಾಗಿದೆ, ಬಿಕ್ಕಟ್ಟು ಶಮನಗೊಳಿಸುವ ಪ್ರಯತ್ನದಲ್ಲಿ ಇದು ಪ್ರೋತ್ಸಾಹದಾಯಕ ಬೆಳವಣಿಗೆಯಾಗಿದೆ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ, ಹೊಸ ಸ್ವರೂಪದ ವೈರಸ್ನ ಅಪಾಯ ಇರುವುದರಿಂದ ಸೋಂಕು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರದಂತಹ ಕ್ರಮಗಳನ್ನು ಅನುಸರಿಸುವಂತೆ ಬೈಡನ್ ಆಗ್ರಹಿಸಿದ್ದಾರೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಕ್ಲಿನಿಕಲ್ ಟ್ರಯಲ್ನಲ್ಲಿ ಕೋವಿಡ್ ಲಸಿಕೆಯು ಅಮೆರಿಕದಲ್ಲಿ ಶೇ 85.9ರಷ್ಟು ಪರಿಣಾಮಕಾರಿಯಾಗಿರುವುದು ತಿಳಿದು ಬಂದಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿರುವ ಪ್ರಯೋಗಗಳಲ್ಲಿ ಶೇ 81.7 ಹಾಗೂ ಬ್ರೆಜಿಲ್ನಲ್ಲಿ ಶೇ 87.6ರಷ್ಟು ಪರಿಣಾಮಕಾರಿಯಾಗಿರುವುದು ದಾಖಲಾಗಿದೆ. ಒಟ್ಟು 39,321 ಜನರನ್ನು ಲಸಿಕೆ ಪ್ರಯೋಗಕ್ಕೆ ಒಳಪಡಿಸಲಾಗಿತ್ತು.

ಇದನ್ನೂ ಓದಿ– ಅಮೆರಿಕ: ಕೋವಿಡ್ ಪ್ಯಾಕೇಜ್ಗೆ ಅನುಮೋದನೆ

ಮಾರ್ಚ್ ಅಂತ್ಯದೊಳಗೆ ಲಸಿಕೆಯ 2 ಕೋಟಿ ಡೋಸ್ಗಳ ಪೂರೈಕೆ ಮಾಡುವುದಾಗಿ ಜಾನ್ಸನ್ ಆ್ಯಂಡ್ ಜಾನ್ಸನ್ ಹೇಳಿದೆ. ಜೂನ್ ವೇಳೆಗೆ 10 ಕೋಟಿ ಡೋಸ್ಗಳಷ್ಟು ಲಸಿಕೆ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.