ವಾಷಿಂಗ್ಟನ್: ಹೈದರಾಬಾದ್ ಮೂಲದ ಔಷಧ ಮತ್ತು ಲಸಿಕೆ ತಯಾರಿಕಾ ಕಂಪನಿಯೊಂದಿಗೆ ಅಭಿವೃದ್ಧಿಪಡಿಸಿರುವ ಹೊಸ ಕೋವಿಡ್ ಲಸಿಕೆಯ ಮೂರನೇ ಕ್ಲಿನಿಕಲ್ ಟ್ರಯಲ್ ಅನ್ನು ಭಾರತದಲ್ಲಿ ನಡೆಸಲು ಟೆಕ್ಸಾಸ್ ಮೂಲದ ಪ್ರತಿಷ್ಠಿತ ಕಂಪನಿ ಯೊಂದಕ್ಕೆ ಅನಮೋದನೆ ದೊರೆತಿರುವುದಕ್ಕೆ ರಿಪಬ್ಲಿಕನ್ ಸಂಸದ ಮೈಕಲ್ ಮ್ಯಾಕ್‌ಕೌಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರಾಗಿರುವ ಮೈಕಲ್ ಅವರು,‘ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾಗುತ್ತಿರುವ ಈ ಲಸಿಕೆಯ 30 ಕೋಟಿ ಡೋಸ್‌ಗಳಷ್ಟನ್ನು ಮುಂಗಡವಾಗಿ ಖರೀದಿಸುವುದಾಗಿ ಪ್ರಕಟಿಸಿರುವ ಭಾರತ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ಸಿಕ್ಕಿರುವ ಕುರಿತ ಮಾಹಿತಿಯನ್ನು ಹ್ಯೂಸ್ಟನ್‌ನಲ್ಲಿರುವ ಟೆಕ್ಸಾಸ್ ಮಕ್ಕಳ ಆಸ್ಪತ್ರೆಯಲ್ಲಿ ಗುರುವಾರ ಪ್ರಕಟಿಸಲಾಯಿತು.

ಹೈದರಾಬಾದ್ ಮೂಲದ ಔಷಧ – ಲಸಿಕೆ ತಯಾರಿಕಾ ಕಂಪನಿಯಾದ ಬೇಯ್ಲೊರ್ ಕಾಲೇಜ್ ಆಫ್ ಮೆಡಿಸಿನ್ ಅಂಡ್ ಬಯೋಲಾಜಿಕಲ್ ಇ– ಲಿಮಿಟೆಡ್ ಸಹಭಾಗಿತ್ವದಲ್ಲಿ ಈ ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಆರಂಭದಲ್ಲಿ ಲಸಿಕೆ ಉತ್ಪಾದನಾ ಪ್ರಕ್ರಿಯೆಯನ್ನು ಹ್ಯೂಸ್ಟನ್‌ನಲ್ಲಿರುವ ಟೆಕ್ಸಾಸ್ ಚಿಲ್ಡ್ರನ್ಸ್ ಹಾಸ್ಪಿಟಲ್ ಸೆಂಟರ್ ಫಾರ್ ವ್ಯಾಕ್ಸಿನ್ ಡೆವಲಪ್‌ಮೆಂಟ್ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾಯಿತು. ಆಸ್ಪತ್ರೆಯ ಸಹ-ನಿರ್ದೇಶಕರಾದ ಡಾ. ಮಾರಿಯಾ ಎಲೆನಾ ಬೊಟಾಜ್ಜಿ ಮತ್ತು ಪೀಟರ್ ಹೊಟೆಜ್ ನೇತೃತ್ವದಲ್ಲಿ, ಪರವಾನಗಿ ಪಡೆದ ಬಿಸಿಎಂ ವೆಂಚರ್ಸ್, ಬೇಯ್ಲೊರ್ ಕಾಲೇಜ್ ಆಫ್ ಮೆಡಿಸಿನ್ ಕಂಪನಿಗಳ ಸಹಯೋಗದೊಂದಿಗೆ ಈ ಪ್ರಕ್ರಿಯೆ ನಡೆಯಿತು.

‘ಟೆಕ್ಸಾಸ್ ಚಿಲ್ಡ್ರನ್ಸ್ ಹಾಸ್ಪಿಟಲ್, ಚಿಕಿತ್ಸೆ ಮತ್ತು ಚಿಕಿತ್ಸೆಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ಸಮುದಾಯದ ಆರೋಗ್ಯ ಸುಧಾರಣೆಗಾಗಿ ಕೆಲಸ ಮಾಡುತ್ತಿದೆ‘ ಎಂದು ಮೈಕಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.