ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಪ್ರಭಾವ ಹೆಚ್ಚಳ: ಯುನೆಸ್ಕೊಗೆ ಮರುಸೇರ್ಪಡೆಯಾಗಲು ಅಮೆರಿಕ ನಿರ್ಧಾರ

Published 12 ಜೂನ್ 2023, 14:23 IST
Last Updated 12 ಜೂನ್ 2023, 14:23 IST
ಅಕ್ಷರ ಗಾತ್ರ

ಪ್ಯಾರಿಸ್‌: ವಿಶ್ವಸಂಸ್ಥೆಯ ಸಂಸ್ಕೃತಿ ಮತ್ತು ಶಿಕ್ಷಣ ಆಯೋಗ ‘ಯುನೆಸ್ಕೊ’ಗೆ ಮರುಸೇರ್ಪಡೆ ಆಗಲು ಅಮೆರಿಕ ನಿರ್ಧರಿಸಿದ್ದು  ₹49.46 ಸಾವಿರ ಕೋಟಿಗೂ ಹೆಚ್ಚು ಬಾಕಿ ಮೊತ್ತವನ್ನು ಪಾವತಿಸಲು ತಯಾರಿದೆ ಎಂದು ಯುನೆಸ್ಕೊ ಸೋಮವಾರ ಘೋಷಿಸಿದೆ. 

ಪ್ಯಾಲೆಸ್ಟೀನ್‌ನನ್ನು ಸದಸ್ಯ ರಾಷ್ಟ್ರವನ್ನಾಗಿಸುವ ಯುನೆಸ್ಕೊದ ತೀರ್ಮಾನವನ್ನು ಅಮೆರಿಕ ವಿರೋಧಿಸಿತ್ತು. ಈ ಕಾರಣಕ್ಕೆ 2013ರಲ್ಲಿ ತನ್ನ ಮತ ಚಲಾವಣೆ ಹಕ್ಕನ್ನು ಕಳೆದುಕೊಂಡಿತ್ತು. 2017ರಲ್ಲಿ ಸದಸ್ಯತ್ವವನ್ನು ಹಿಂಪಡೆದಿತ್ತು. 

ಯುನೆಸ್ಕೊ ನೀತಿ ನಿರ್ಣಯದಲ್ಲಿ ಅಮೆರಿಕದಿಂದ ತೆರವಾದ ಸ್ಥಾನವನ್ನು ಈಗ ಚೀನಾ ತುಂಬುತ್ತಿದೆ. ಅದರಲ್ಲೂ, ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ ಹಾಗೂ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿಯ ಗುಣಮಟ್ಟವನ್ನು ನಿಗದಿಪಡಿಸುವಲ್ಲಿ ಚೀನಾ ಮಹತ್ವದ ಪಾತ್ರ ವಹಿಸುತ್ತಿದೆ. ಇವು ಯುನೆಸ್ಕೊಗೆ ಮರುಸೇರ್ಪಡೆ ಆಗುವುದಕ್ಕೆ ಅಮೆರಿಕವನ್ನು ಪ್ರೇರೇಪಿಸಿರುವ ಅಂಶಗಳು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. 

ಅಮೆರಿಕದ ವಿದೇಶಾಂಗ ಉಪ ಕಾರ್ಯದರ್ಶಿ (ನಿರ್ವಹಣೆ ಮತ್ತು ಸಂಪನ್ಮೂಲ) ರಿಚರ್ಡ್‌ ವರ್ಮ ಅವರು ಮರುಸೇರ್ಪಡೆಗೆ ಸಂಬಂಧಿಸಿ ಯುನೆಸ್ಕೊ ಪ್ರಧಾನ ನಿರ್ದೇಶಕ ಔಡ್ರೆ ಅಝೌಲೆ ಅವರಿಗೆ ಪತ್ರ ಬರೆದಿದ್ದಾರೆ. ಸೋಮವಾರ ನಡೆದ ಯುನೆಸ್ಕೊದ ವಿಶೇಷ ಸಭೆಯಲ್ಲಿ ಔಡ್ರೆ ಅವರು ಅಮೆರಿಕದ ನಿರ್ಧಾರದ ಕುರಿತು ಪ್ರಸ್ತಾಪಿಸಿದ್ದಾರೆ ಎಂದು ಯುನೆಸ್ಕೊ ರಾಯಭಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕದ ಈ ನಿರ್ಧಾರದಿಂದ ಯುನೆಸ್ಕೊಗೆ ಭಾರಿ ಆರ್ಥಿಕ ನೆರವು ದೊರೆಯುತ್ತದೆ ಎಂದು ಅಂದಾಜಿಸಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT