ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರಂಪ್‌ ಟ್ವಿಟರ್‌ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದಕ್ಕೆ ಖಂಡನೆ

Last Updated 9 ಜನವರಿ 2021, 13:31 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಟ್ರಂಪ್‌ ಟ್ವಿಟರ್‌ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ ಟ್ವಿಟರ್‌ ಕ್ರಮವನ್ನು ಭಾರತೀಯ ಸಂಜಾತೆ ರಾಜಕಾರಣಿ ನಿಕ್ಕಿ ಹಾಲೆ, ಟ್ರಂಪ್‌ ಅವರ ಪುತ್ರ ಡೊನಾಲ್ಡ್‌ ಟ್ರಂಪ್‌ ಜ್ಯೂನಿಯರ್‌ ಸೇರಿದಂತೆ ಹಲವು ರಿಪಬ್ಲಿಕನ್‌ ನಾಯಕರು ಖಂಡಿಸಿದ್ದು, ‘ಅಮೆರಿಕವು ಚೀನಾವಲ್ಲ’ ಎಂದು ತಿರುಗೇಟು ನೀಡಿದ್ದಾರೆ.

‘ಚೀನಾದಲ್ಲಿ ಜನರನ್ನು ನಿಶ್ಶಬ್ದರನ್ನಾಗಿಸುವ ಕ್ರಮಗಳಾಗುತ್ತವೆಯೇ ವಿನಃ ಅಮೆರಿಕದಲ್ಲಿ ಅಲ್ಲ’ ಎಂದು ಹಾಲೆ ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

‘ಇತಿಹಾಸವನ್ನು ಅಳಿಸುವುದರ ಮುಖಾಂತರವಾಗಲಿ ಅಥವಾ ಜನರನ್ನು ನಿಶ್ಶಬ್ದರನ್ನಾಗಿಸುವ ಮುಖಾಂತರ ಯಾರನ್ನೂ ಒಗ್ಗೂಡಿಸಲು ಸಾಧ್ಯವಿಲ್ಲ. ಇಂಥ ಕ್ರಮವು ನಮ್ಮನ್ನು ಮತ್ತಷ್ಟು ವಿಭಜನೆ ಮಾಡುತ್ತದೆ. ಮಾಧ್ಯಮ ಸಂಸ್ಥೆಗಳಂತೆ ಸಾಮಾಜಿಕ ಜಾಲತಾಣ ವೇದಿಕೆಗಳು ವರ್ತಿಸುತ್ತಿವೆ. ನೀವು ಒಪ್ಪಿದರೂ, ಒಪ್ಪದೇ ಇದ್ದರೂ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯವಿರಬೇಕು’ ಎಂದು ವಸತಿ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿ ಡಾ.ಬೆನ್‌ ಕಾರ್ಸನ್‌ ಟ್ವಿಟರ್‌ ನಡೆಯನ್ನು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT