ವಾಷಿಂಗ್ಟನ್: ಕೊರೊನಾ ಸೋಂಕಿಗೆ ಲಸಿಕೆಯನ್ನು ಸಂಶೋಧಿಸುವ ಕಾರ್ಯದಲ್ಲಿ ಅಮೆರಿಕ ಭಾರಿ ಪ್ರಗತಿ ಸಾಧಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ಸೋಂಕಿನಿಂದ ಗುಣಮುಖರಾದ ನಂತರ ನೀಡಬೇಕಾದ ಚಿಕಿತ್ಸಾ ಕ್ರಮದಲ್ಲಿಯೂ ಮಹತ್ತರ ಸಂಶೋಧನೆ ನಡೆಸಲಾಗಿದೆ. ಕೊರೊನಾ ಸೋಂಕಿನ ಲಸಿಕೆಗೆ ಸಂಬಂಧಪಟ್ಟಂತೆ ಶೀಘ್ರವೇ ಒಳ್ಳೆಯ ಸುದ್ದಿಯನ್ನು ನೀಡುತ್ತೇವೆ’ ಎಂದು ಹೇಳಿದ್ದಾರೆ.

ಶ್ವೇತಭವನದಲ್ಲಿ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಅವರು ಹಿರಿಯ ನಾಗರಿಕರೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು.

‘ವೈರಸ್ ಈ ರೀತಿ ಹರಡಲು ಚೀನಾ ಅವಕಾಶ ನೀಡಬಾರದಾಗಿತ್ತು. ಇಡೀ ವಿಶ್ವವೇ ಈ ಸೋಂಕಿನಿಂದ ತತ್ತರಿಸಿದೆ. ಅಮೆರಿಕದಲ್ಲಿ ಈಗ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಶೀಘ್ರವೇ ದೇಶವು ಕೊರೊನಾ ಸೋಂಕಿನಿಂದ ಮುಕ್ತವಾಗಲಿದೆ’ ಎಂದೂ ಅವರು ಹೇಳಿದರು.

‘ಫ್ಲೂ, ಸಾರ್ಸ್ ಅಥವಾ ಎಚ್1ಎನ್1ನಂತಹ ಸೋಂಕಿನಿಂದ ಬಳಲುವವರು ಇದ್ದಾರೆ. ಆದರೆ, ಕಾರಣ ಏನೇ ಇದ್ದರೂ ಕೋವಿಡ್–19 ನಿಂದ ಬಳಲುತ್ತಿರುವವರ ಸಂಖ್ಯೆ ಬಹಳ ಕಡಿಮೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.