ವಾಷಿಂಗ್ಟನ್: ಅಮೆರಿಕದ ಮಿಲಿಟರಿ ವಿಮಾನವು ಅಕ್ರಮ ವಲಸಿಗರನ್ನು ಭಾರತಕ್ಕೆ ಗಡೀಪಾರು ಮಾಡುತ್ತಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

ದೂರದ ದೇಶಗಳಿಗೆ ವಲಸಿಗರನ್ನು ಗಡೀಪಾರು ಮಾಡಲು ಅಮೆರಿಕದ ಮಿಲಿಟರಿ ಸಾರಿಗೆಯನ್ನು ಬಳಸಲಾಗುತ್ತಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಲಸೆ ಕಾರ್ಯಸೂಚಿಯನ್ನು ನಿರ್ವಹಿಸಲು ಮಿಲಿಟರಿಯ ನೆರವು ಪಡೆದಿದ್ದಾರೆ. ಅಮೆರಿಕಾ– ಮೆಕ್ಸಿಕೋ ಗಡಿಗೆ ಹೆಚ್ಚುವರಿ ಪಡೆಗಳನ್ನು ಕಳುಹಿಸುವುದು, ವಲಸಿಗರ ಗಡೀಪಾರು ಮತ್ತು ಮಿಲಿಟರಿ ನೆಲೆಗಳನ್ನು ತೆರೆಯಲು ಸೇನೆಯ ಸಹಾಯ ಪಡೆಯುತ್ತಿದ್ದಾರೆ ಎನ್ನಲಾಗಿದೆ.

C-17 ವಿಮಾನವು ವಲಸಿಗರೊಂದಿಗೆ ಭಾರತಕ್ಕೆ ಹೊರಟಿತ್ತು. ಆದರೆ ಕನಿಷ್ಠ 24 ಗಂಟೆಯಾದರೂ ವಿಮಾನ ತಲುಪಲಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟೆಕ್ಸಾಸ್ನ ಎಲ್ ಪಾಸೊ ಮತ್ತು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಅಮೆರಿಕದ ಅಧಿಕಾರಿಗಳು ಬಂಧಿಸಿರುವ 5,000 ಕ್ಕೂ ಹೆಚ್ಚು ವಲಸಿಗರನ್ನು ಗಡೀಪಾರು ಮಾಡಲು ಪೆಂಟಗನ್ ವಿಮಾನಗಳನ್ನು ಒದಗಿಸಲು ಪ್ರಾರಂಭಿಸಿದೆ.

ಇಲ್ಲಿಯವರೆಗೆ, ಮಿಲಿಟರಿ ವಿಮಾನಗಳು ಗ್ವಾಟೆಮಾಲಾ, ಪೆರು ಮತ್ತು ಹೊಂಡುರಾಸ್ಗೆ ವಲಸಿಗರನ್ನು ಗಡೀಪಾರು ಮಾಡಿದೆ.
.ಅಮೆರಿಕ: ಅಕ್ರಮ ವಲಸಿಗರ ಗಡೀಪಾರು ಕಾರ್ಯಾಚರಣೆ ಶುರು; ನೂರಾರು ವಲಸಿಗರ ಸೆರೆ.ವಲಸಿಗರ ಗಡೀಪಾರು ಮಾಡುವ ಟ್ರಂಪ್ ಯೋಜನೆ ನಾಚಿಕೆಗೇಡು: ಪೋಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.