ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್‌ನ ಅಮೆರಿಕದ ಧೂತಾವಾಸ ಕಚೇರಿ ಮೇಲೆ ಕ್ಷಿಪಣಿ ದಾಳಿ

Last Updated 13 ಮಾರ್ಚ್ 2022, 14:41 IST
ಅಕ್ಷರ ಗಾತ್ರ

ಬಾಗ್ದಾದ್‌/ಅರ್ಬಿಲ್‌: ಇರಾಕ್‌ನ ಅರ್ಬಿಲ್‌ ನಗರದಲ್ಲಿರುವ ಅಮೆರಿಕದದೂತಾವಾಸ ಕಚೇರಿಸಂಕೀರ್ಣದ ಬಳಿ 12 ಕ್ಷಿಪಣಿಗಳು ಅಪ್ಪಳಿಸಿವೆ. ಅದೃಷ್ಟವಶಾತ್‌ ಯಾವುದೇ ಸಾವು–ನೋವು ಸಂಭವಿಸಿಲ್ಲ. ಈ ಕ್ಷಿಪಣಿಗಳನ್ನು ಇರಾನ್‌ಉಡಾಯಿಸಿದೆ ಎಂದು ಅಮೆರಿಕ ಮತ್ತು ಇರಾಕ್‌ನ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಸಿರಿಯಾದ ಡಮಾಸ್ಕಸ್‌ ಬಳಿ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಇರಾನಿನ ಭದ್ರತಾ ಪಡೆಯ ಇಬ್ಬರು ಸತ್ತಿದ್ದರು. ಅದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ ಎಂದು ಇರಾಕ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರ್ಬಿಲ್‌ ನಗರದಲ್ಲಿರುವ ಅಮೆರಿಕದ ಪಡೆಗಳ ಮೇಲೆಆಗಾಗ ರಾಕೆಟ್‌ ಮತ್ತು ಡ್ರೋಣ್‌ ದಾಳಿ ನಡೆಯುತ್ತಿದ್ದು, ಈ ದಾಳಿಯನ್ನು ಇರಾನಿನ ಬೆಂಬಲಿತ ಉಗ್ರ ಸಂಘಟನೆಗಳು ನಡೆಸುತ್ತಿವೆ ಎಂದು ಅಮೆರಿಕ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT