ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ | ಬೈಡನ್‌ಗಿಂತ ಟ್ರಂಪ್‌ ಮುಂದು: ಸಮೀಕ್ಷೆ

Published 25 ಸೆಪ್ಟೆಂಬರ್ 2023, 3:04 IST
Last Updated 25 ಸೆಪ್ಟೆಂಬರ್ 2023, 3:04 IST
ಅಕ್ಷರ ಗಾತ್ರ

ವಾಷಿಂಗ್ಟನ್‌: 2024ರ ಅಮೆರಿಕ ಅಧ್ಯಕ್ಷ ಚುನಾವಣೆಯ ಸ್ಪರ್ಧೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರು, ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗಿಂತ 10 ಅಂಕಗಳಷ್ಟು ಹಿಂದೆ ಇದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ಹಾಗೂ ಎಬಿಸಿ ನ್ಯೂಸ್ ಚಾನಲ್ ನಡೆಸಿದ ಸಮೀಕ್ಷೆ ಹೇಳಿದೆ.

‘ನೇರಾ ನೇರ ಹಣಾಹಣಿಯಲ್ಲಿ ಟ್ರಂ‍ಪ್ ಹಾಗೂ ಬೈಡನ್‌ ಕ್ರಮವಾಗಿ 51–42 ಅಂಕ ಗಳಿಸಿದ್ದಾರೆ. ಜತೆಗೆ ಇತರೆ ರಿಪಬ್ಲಿಕನ್‌ ಸ್ಪರ್ಧಿಗಳಿಗಿಂತಲೂ ಟ್ರಂಪ್‌ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಭಾನುವಾರ ಈ ಸಮೀಕ್ಷೆ ಬಿಡುಗಡೆಗೊಂಡಿದೆ.

ರಿಪಬ್ಲಿಕನ್‌ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆ‌ಗೆ ಸ್ಪರ್ಧಾಕಾಂಕ್ಷಿಗಳಾಗಿರುವ ಭಾರತೀಯ ಮೂಲದ, ದಕ್ಷಿಣ ಕರೊಲಿನಾದ ಮಾಜಿ ಗವರ್ನರ್‌ ನಿಕ್ಕಿ ಹ್ಯಾಲೆ ಹಾಗೂ ಉದ್ಯಮಿ ವಿವೇಕ್‌ ರಾಮಸ್ವಾಮಿ ಈಗ ಮುನ್ನಡೆ ಪಡೆಯುತ್ತಿದ್ದಾರೆ. ರಾಜಕೀಯ ಪಂಡಿತರ ಪ್ರಕಾರ ಟ್ರಂಪ್ ಅವರು ರಿಪಬ್ಲಿಕನ್‌ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗುವುದು ಬಹುತೇಕ ಖಚಿತ.

ಬೈಡನ್‌ ಅವರ ಆಡಳಿತದ ಅವಧಿಯಲ್ಲಿ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ಜನರು ಹೇಳಿದ್ದಾರೆ. ಅಲ್ಲದೆ ಬೈಡನ್‌ ಅವರಿಗೆ ವಯಸ್ಸಾಗಿದೆ ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಮುಕ್ಕಾಲು ಭಾಗ ಜನ ಅಭಿಪ್ರಾಯಪಟ್ಟಿದ್ದಾರೆ. ಹಾಗೆ ನೋಡಿದರೆ ಡೊನಾಲ್ಡ್‌ ಟ್ರಂಪ್‌ ಮುನ್ನಡೆಯಲ್ಲಿದ್ದಾರೆ. ಬೈಡನ್‌ ಅವರಿಗೆ ತೀವ್ರ ಸವಾಲುಗಳಿವೆ ಎಂದು ಸಮೀಕ್ಷೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT