ಅಟ್ಲಾಂಟಾ: ಅಮೆರಿಕ ಅಧ್ಯಕ್ಷೀಯ ಚುನಾವಣೆಯು ಕೊನೇ ಹಂತಕ್ಕೆ ತಲುಪಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವಿನ ವಾಕ್ಸಮರ ಬಿರುಸು ಪಡೆದುಕೊಂಡಿದೆ.

ಇಬ್ಬರ ನಡುವೆ ತೀವ್ರ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಮತದಾರರನ್ನು ಸೆಳೆಯುವ ಕೊನೇ ಪ್ರಯತ್ನವನ್ನು ಇಬ್ಬರೂ ನಡೆಸುತ್ತಿದ್ದಾರೆ. ತಮ್ಮ ತಮ್ಮ ಪ್ರಚಾರ ಸಭೆಗಳಲ್ಲಿ ಪರಸ್ಪರರ ಮೇಲೆ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.

ಟ್ರಂಪ್ ಅವರನ್ನು ಇತ್ತೀಚೆಗೆ ಡೆಮಾಕ್ರಟಿಕ್ ಪಕ್ಷವು ನಾಜಿಗಳಿಗೆ ಹೋಲಿಸಿತ್ತು. ಜಾರ್ಜಿಯಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಟ್ರಂಪ್ ಅವರು ಈ ಆರೋಪಕ್ಕೆ ಪ್ರಕ್ರಿಯೆ ನೀಡಿದ್ದಾರೆ. ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಜಾರ್ಜಿಯಾ ಕೂಡ ಒಂದಾಗಿದೆ.

‘ಕಮಲಾ ಅವರು ನನ್ನ ಮೇಲೆ ಹೊಸದೊಂದು ಆರೋಪ ಮಾಡಿದ್ದಾರೆ. ಅವರ ಪ್ರಕಾರ, ಯಾರೆಲ್ಲಾ ಅವರಿಗೆ (ಕಮಲಾ) ಮತ ನೀಡುವುದಿಲ್ಲವೊ ಅವರೆಲ್ಲೂ ನಾಜಿಗಳಂತೆ. ನಾನು ನಾಜಿ ಅಲ್ಲ. ನಾನು ನಾಜಿಗಳನ್ನು ವಿರೋಧಿಸುವವನು’ ಎಂದಿದ್ದಾರೆ. ತಮ್ಮನ್ನು ಫ್ಯಾಸಿಸ್ಟ್ ಎಂದು ಕರೆದ ಬಗ್ಗೆಯೂ ಟ್ರಂಪ್ ವಿರೋಧ ವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್ನ ಮ್ಯಾಡಿಸನ್ ನಗರದಲ್ಲಿ ನಡೆದ ಟ್ರಂಪ್ ಅವರ ಪ್ರಚಾರ ಸಭೆಯನ್ನು ಕಮಲಾ ಹ್ಯಾರಿಸ್ ಅವರು 1939ರ ನಾಜಿಗಳ ಸಭೆಗೆ ಹೋಲಿಸಿದ್ದಾರೆ.

ತೀವ್ರ ಹಣಾಹಣಿ: ಸಮೀಕ್ಷೆಗಳ ಅಂದಾಜು ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ಅವರಿಗೆ ದೇಶದಾದ್ಯಂತ ಎಷ್ಟು ಶೇಕಡಾವಾರು ಮತಗಳು ಲಭಿಸಲಿವೆ ಎನ್ನುವ ಕುರಿತು ವಿವಿಧ ಮಾಧ್ಯಮಗಳು ಸಮೀಕ್ಷೆ ನಡೆಸಿವೆ. ‘ಫೈವ್ಥರ್ಟಿಏಟ್’ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಕಮಲಾ ಅವರು ಟ್ರಂಪ್ ಅವರಿಗಿಂತ ಶೇ 1.7ರಷ್ಟು ಮುನ್ನಡೆ ಪಡೆದುಕೊಂಡಿದ್ದಾರೆ. ಸಿಎನ್ಎನ್ ಶೇ 47;ಕಮಲಾ ಅವರ ಪರ ಇರುವ ಮತಗಳ ಪ್ರಮಾಣ ಶೇ 47;ಟ್ರಂಪ್ ಅವರ ಪರ ಇರುವ ಮತಗಳ ಪ್ರಮಾಣ. ನ್ಯೂಯಾರ್ಕ್ ಟೈಮ್ಸ್/ಸಿಯಾನ ಕಾಲೇಜು ಶೇ 48;ಕಮಲಾ ಅವರ ಪರ ಇರುವ ಮತಗಳ ಪ್ರಮಾಣ ಶೇ 48;ಟ್ರಂಪ್ ಅವರ ಪರ ಇರುವ ಮತಗಳ ಪ್ರಮಾಣ ಶೇ 4;ಯಾರಿಗೆ ಮತ ನೀಡಬೇಕು ಎಂದು ನಿರ್ಧರಿಸದ ಜನರ ಪ್ರಮಾಣ. ಫೈನಾನ್ಷಿಯಲ್ ಟೈಮ್ಸ್/ಮೆಶಿಗನ್ ರಾಸ್ ಸ್ಕೂಲ್ ಆಫ್ ಬ್ಯುಜಿನೆಸ್ (ಆರ್ಥಿಕ ವಿಷಯಗಳ ನಿರ್ವಹಣೆ ಕುರಿತ ಸಮೀಕ್ಷೆ) ಶೇ 43;ಕಮಲಾ ಅವರ ಪರ ಇರುವ ಮತಗಳ ಪ್ರಮಾಣ ಶೇ 44;ಟ್ರಂಪ್ ಅವರ ಪರ ಇರುವ ಮತಗಳ ಪ್ರಮಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.