ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಮತ್ತೊಬ್ಬ ವ್ಯಕ್ತಿಯಲ್ಲಿ ಹಕ್ಕಿ ಜ್ವರ ಪತ್ತೆ

Published 23 ಮೇ 2024, 3:35 IST
Last Updated 23 ಮೇ 2024, 3:35 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೊಬ್ಬ ವ್ಯಕ್ತಿಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ಎಬಿಸಿ ನ್ಯೂಸ್ ವರದಿ ಮಾಡಿದೆ.

ತೋಟದ ಕೆಲಸಗಾರನೊಬ್ಬನಿಗೆ ಹಕ್ಕಿ ಜ್ವರದ ಸೋಂಕು ತಹಗುಲಿರುವುದು ಕಂಡುಬಂದಿದೆ ಎಂದು ಮಿಷಿಗನ್‌ನ ಆರೋಗ್ಯ ಮತ್ತು ಮಾನವ ಸಂಪನ್ಮೂಲ ಸೇವೆ(ಎಂಡಿಎಚ್‌ಎಚ್‌ಎಸ್) ಇಲಾಖೆ ತಿಳಿಸಿದೆ.

ಮಿಷಿಗನ್‌ನಲ್ಲಿ ಪಶುಸಂಗೋಪನೆಯಲ್ಲಿ ನಿರತನಾಗಿರುವ ವ್ಯಕ್ತಿಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಎಚ್‌ಎಸ್‌ಎನ್‌1 ಸೋಂಕಿತ ವ್ಯಕ್ತಿ ಜಾನುವಾರುಗಳ ಪೋಷಣೆ ಜವಾಬ್ದಾರಿ ನಿರ್ವಹಿಸುತ್ತಿದ್ದು, ಆತನನ್ನು ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿಡಿಸಿ) ಹೇಳಿದೆ.

ಈ ಸಂಬಂಧ ಪ್ರಯೋಗಾಲಯದ ವರದಿಯು ಪಾಸಿಟಿವ್ ಬಂದಿದೆ ಎಂದು ಸಿಡಿಸಿ ಹೇಳಿದೆ.

ತೋಟದ ಕೆಲಸಗಾರ ಚೇತರಿಸಿಕೊಳ್ಳುತ್ತಿದ್ದು, ಆತನ ಗುರುತನ್ನು ಗೋಪ್ಯವಾಗಿಡಲಾಗಿದೆ ಎಂದು ಎಂಡಿಎಚ್‌ಎಚ್‌ಎಸ್ ತಿಳಿಸಿದೆ.

ಏಪ್ರಿಲ್ ತಿಂಗಳಲ್ಲಿ ಟೆಕ್ಸಾಸ್‌ನಲ್ಲಿ ಮೊದಲ ಹಕ್ಕಿ ಜ್ವರದ ಪ್ರಕರಣ ಪತ್ತೆಯಾಗಿತ್ತು. ಅದೂ ಸಹ ಜಾನುವಾರು ಪೋಷಣೆಯಲ್ಲಿ ತೊಡಗಿದ್ದ ವ್ಯಕ್ತಿಯಲ್ಲೇ ಕಂಡುಬಂದಿತ್ತು.

ಸೋಂಕಿತ ವ್ಯಕ್ತಿಯು ಅನಾರೋಗ್ಯಪೀಡಿತ ಜಾನುವಾರನ್ನು ನೋಡಿಕೊಳ್ಳುತ್ತಿದ್ದ. ಕಣ್ಣು ಕೆಂಪಾದ ರೋಗಲಕ್ಷಣ ಕಂಡುಬಂದಿದೆ. ಆದರೆ, ಅಪಾಯದ ಪ್ರಮಾಣ ಕಡಿಮೆ ಎಂದು ಸಿಡಿಸಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT